ADVERTISEMENT

ಸಾಯಿಬಾಬಾ ಮಂದಿರ: ನೂರು ಜನರಿಗೆ ಉಚಿತ ನೇತ್ರ ತಪಾಸಣೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2019, 14:03 IST
Last Updated 14 ಜುಲೈ 2019, 14:03 IST
ವೈದ್ಯರು ನೇತ್ರ ತಪಾಸಣೆ ಮಾಡಿದರು.
ವೈದ್ಯರು ನೇತ್ರ ತಪಾಸಣೆ ಮಾಡಿದರು.   

ತುಮಕೂರು: ಗುರುಪೂರ್ಣಿಮೆ ಪ್ರಯುಕ್ತ ಇಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಹತ್ತಿರದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಸಾಯಿ ಬಾಬಾ ಮಂದಿರ ಟ್ರಸ್ಟ್ ಹಾಗೂ ರೋಟರಿ ತುಮಕೂರು ಉತ್ತರ ಘಟಕದ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ ನಡೆಯಿತು.

ನೇತ್ರದೀಪ ಕಣ್ಣಿನ ಆಸ್ಪತ್ರೆಯ ಡಾ.ಲತಾ ನೇತೃತ್ವದ ವೈದ್ಯರು ಮತ್ತು ಸಿಬ್ಬಂದಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 2.30ರವರೆಗೂ ನೇತ್ರ ತಪಾಸಣೆ ನಡೆಸಿದರು. ತಪಾಸಣೆಗೆ ಬಂದಿದ್ದವರಿಗೆ ಸಾಯಿಮಂದಿರ ಟ್ರಸ್ಟ್ ಉಪಾಹಾರ ವ್ಯವಸ್ಥೆ ಮಾಡಿತ್ತು. ಟ್ರಸ್ಟ್ ಅಧ್ಯಕ್ಷ ನಟರಾಜು, ಟ್ರಸ್ಟಿಗಳಾದ ನಂಜುಂಡಶೆಟ್ಟಿ, ಸುಜಯ್‌ ಬಾಬು ಹಾಗೂ ರೋಟರಿ ಪದಾಧಿಕಾರಿಗಳು ಇದ್ದರು.

‘ನೂರಕ್ಕೂ ಹೆಚ್ಚು ಜನರು ನೇತ್ರತಪಾಸಣೆ ಮಾಡಿಸಿಕೊಂಡರು. ಇದರಲ್ಲಿ 30 ಮಂದಿಗೆ ಶಸ್ತ್ರಚಿಕಿತ್ಸೆಗೆ ಗುರುತಿಸಲಾಯಿತು. 30 ಮಂದಿಗೆ ಕಣ್ಣಿಗೆ ಔಷಧಿ( ಐ ಡ್ರಾಪ್ಸ್) ವಿತರಿಸಲಾಯಿತು. 40 ಮಂದಿಗೆ ಕನ್ನಡ ನೀಡಲಾಯಿತು’ ಎಂದು ಸಾಯಿಮಂದಿರ ಟ್ರಸ್ಟ್‌ ಕಾರ್ಯದರ್ಶಿ ಶ್ರೀನಿವಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.