
ಪ್ರಜಾವಾಣಿ ವಾರ್ತೆ
ಮಧುಗಿರಿ: ಪಟ್ಟಣದ ಮಹಿಳಾ ಸಮಾಜದ ಆವರಣದಲ್ಲಿ ಭಾನುವಾರ ಮಹಿಳಾ ಸಮಾಜದ ವತಿಯಿಂದ ಸಂಕ್ರಾಂತಿ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸಿರಿಗೆಜ್ಜೆ ತಂಡದ ಅಧ್ಯಕ್ಷ ರಾಮಚಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವೀರಗಾಸೆ, ಕೋಲಾಟ, ಬೀಸುವ ಪದ ಮತ್ತು ನಂದಿಕೋಲು ಸೊಗಸಾಗಿ ಮೂಡಿಬಂದಿತು.
ಸಂಘದ ಗೌರವ ಅಧ್ಯಕ್ಷೆ ಪುಷ್ಪಾವತಮ್ಮ, ಮಹಿಳಾ ಸಮಾಜದ ಅಧ್ಯಕ್ಷೆ ಸಹನಾ ನಾಗೇಶ್, ಪ್ರೇಮಲೀಲಾ ನಾರಾಯಣಮೂರ್ತಿ, ನಂಜಮ್ಮ ಸಿದ್ದಪ್ಪ, ಕಾರ್ಯಕಾರಣಿ ಸಮಿತಿ ಮತ್ತು ಮಹಿಳಾ ಸಮಾಜದ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.