ADVERTISEMENT

ಜಾನಪದ ಸಂಸ್ಕೃತಿ ಉಳಿಸಿ: ಪ್ರೊ.ಸ.ವಿ.ರಮೇಶ್

ವಿವಿಯಲ್ಲಿ ನಡೆದ ಪಠ್ಯೇತರ ಚಟುವಟಿಕೆಗಳ ಸಮಾರೋಪ ‘ಕಲಾಸಿರಿ’

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 20:12 IST
Last Updated 14 ಏಪ್ರಿಲ್ 2019, 20:12 IST
‘ಕಲಾಸಿರಿ’ಯನ್ನು ಪ್ರೊ.ವೈ.ಎಸ್.ಸಿದ್ದೇಗೌಡ ಉದ್ಘಾಟಿಸಿದರು. ಪ್ರೊ.ಸ.ಚಿ.ರಮೇಶ್, ಕೆ.ರಾಮಚಂದ್ರಪ್ಪ, ಕೆ.ಎಸ್.ಉಮೇಶ್, ಎಂ.ವಿ. ಬಾಲಕೃಷ್ಣಯ್ಯ, ಡಾ.ಎಸ್.ಶಿವಣ್ಣ, ಆರ್‌.ಸುದೀಪ್ ಕುಮಾರ್ ಹಾಗೂ ಎಂ.ಎನ್.ವೇಣುಗೋಪಾಲ್ ಇದ್ದರು
‘ಕಲಾಸಿರಿ’ಯನ್ನು ಪ್ರೊ.ವೈ.ಎಸ್.ಸಿದ್ದೇಗೌಡ ಉದ್ಘಾಟಿಸಿದರು. ಪ್ರೊ.ಸ.ಚಿ.ರಮೇಶ್, ಕೆ.ರಾಮಚಂದ್ರಪ್ಪ, ಕೆ.ಎಸ್.ಉಮೇಶ್, ಎಂ.ವಿ. ಬಾಲಕೃಷ್ಣಯ್ಯ, ಡಾ.ಎಸ್.ಶಿವಣ್ಣ, ಆರ್‌.ಸುದೀಪ್ ಕುಮಾರ್ ಹಾಗೂ ಎಂ.ಎನ್.ವೇಣುಗೋಪಾಲ್ ಇದ್ದರು   

ತುಮಕೂರು: ಆಧುನಿಕ ಕಾಲದಲ್ಲಿ ಜನಪದ ಮರೆಯಾಗುತ್ತಿದೆ. ಜಾನಪದ ಸಂಸ್ಕೃತಿ ಉಳಿಸುವಲ್ಲಿ ಯುವಕರ ಪರಿಶ್ರಮ ಅಗತ್ಯವಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಸ.ವಿ.ರಮೇಶ್ ತಿಳಿಸಿದರು.

ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ 2018-19 ನೇ ಸಾಲಿನ ಪಠ್ಯೇತರ ಚಟುವಟಿಕೆಗಳ ಸಮಾರೋಪ ‘ಕಲಾಸಿರಿ’ಯಲ್ಲಿ ಮಾತನಾಡಿದ ಅವರು, ‘ಜನಪದ ಎಂಬುದೊಂದು ಬ್ರಹ್ಮಾಂಡ. ಅದರಲ್ಲಿ ವಿಜ್ಞಾನವೂ ಇದೆ. ವಿಜ್ಞಾನದಿಂದ ಸಾಧನೆ ಆಗದ್ದು ಜಾನಪದದಿಂದ ಸಾಧಿತವಾಗುತ್ತದೆ’ ಎಂದರು.

ವಿದ್ಯಾರ್ಥಿಗಳು ಮೊಬೈಲ್ ದಾಸರಾಗುತ್ತಿದ್ದಾರೆ. ಶಿಕ್ಷಣ ಹಾಗೂ ಸಂಸ್ಕೃತಿಯಿಂದ ವಿಮುಖರಾಗುತ್ತಿದ್ದಾರೆ. ಅಧ್ಯಯನಕ್ಕೆ ಕೊಡಬೇಕಾದ ಸಮಯವನ್ನು ಮೊಬೈಲ್‌ಗೆ ಕೊಡುತ್ತಿದ್ದಾರೆ. ಇದರಿಂದ ತಮ್ಮ ಭವಿಷ್ಯ ಮಸುಕಾಗುತ್ತಿದೆ ಎಂಬುದು ಅವರಿಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದರು.

ADVERTISEMENT

ಸಮಾರಂಭವನ್ನು ಉದ್ಘಾಟಿಸಿದ ತುಮಕೂರು ವಿವಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ,‘ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸವಾಗುತ್ತದೆ. ಅವರು ಕೇವಲ ತರಗತಿ ಕೊಠಡಿಗಳ ಅಭ್ಯಾಸಕ್ಕೆ ಸೀಮಿತವಾಗಬಾರದು’ ಎಂದರು.

ಪ್ರಾಂಶುಪಾಲ ಕೆ. ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಕೊಕ್ಕೊ ತರಬೇತುದಾರ ಕೆ.ಎಸ್.ಉಮೇಶ್ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ರಂಗನಿರ್ದೇಶಕರಾದ ಎಂ.ವಿ.ಬಾಲಕೃಷ್ಣಯ್ಯ ಹಾಗೂ ಬಾಲಪ್ರತಿಭೆ ಎಂ.ಎನ್.ವೇಣುಗೋಪಾಲ್ ಅವರನ್ನು ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು ಜರುಗಿದವು. ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ಡಾ.ಎಸ್.ಶಿವಣ್ಣ, ಸಹಾಯಕ ದೈಹಿಕ ಶಿಕ್ಷಣ ನಿರ್ದೇಶಕ ಆರ್.ಸುದೀಪ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.