ADVERTISEMENT

ಸಂಸ್ಕೃತ, ಸಂಸ್ಕೃತಿ ಉಳಿಸಿ: ಹನುಮಂತನಾಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2021, 4:33 IST
Last Updated 1 ಫೆಬ್ರುವರಿ 2021, 4:33 IST
ಹಾಲಪ್ಪ ಪ್ರತಿಷ್ಠಾನದಿಂದ ಎಲೆ ರಾಂಪುರದ ಕುಂಚಿಟಿಗರ ಮಹಾಸಂಸ್ಥಾನ ಮಠದ ವಿದ್ಯಾರ್ಥಿಗಳಿಗೆ ಶಾಲಾ ವಾಹನ ಹಸ್ತಾಂತರಿಸಲಾಯಿತು
ಹಾಲಪ್ಪ ಪ್ರತಿಷ್ಠಾನದಿಂದ ಎಲೆ ರಾಂಪುರದ ಕುಂಚಿಟಿಗರ ಮಹಾಸಂಸ್ಥಾನ ಮಠದ ವಿದ್ಯಾರ್ಥಿಗಳಿಗೆ ಶಾಲಾ ವಾಹನ ಹಸ್ತಾಂತರಿಸಲಾಯಿತು   

ಮಧುಗಿರಿ: ಸಂಸ್ಕೃತ ಮತ್ತು ಸಂಸ್ಕೃತಿ ಉಳಿಸಲು ಶಾಲೆಯನ್ನು ಪ್ರಾರಂಭಿಸಲಾಗಿದೆ ಎಂದು ಕೊರಟಗೆರೆ ತಾಲ್ಲೂಕಿನ ಎಲೆ ರಾಂಪುರದ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಹನುಮಂತನಾಥ ಸ್ವಾಮೀಜಿ ತಿಳಿಸಿದರು.

ಪಟ್ಟಣದಲ್ಲಿ ಹಾಲಪ್ಪ ಪ್ರತಿಷ್ಠಾನ ಕುಂಚಿಟಿಗ ಮಹಾ ಸಂಸ್ಥಾನ ಮಠದ ಶಾಲೆಗೆ ನೀಡಿದ ಉಚಿತ ವಾಹನ ಸ್ವೀಕರಿಸಿ ಮಾತನಾಡಿದರು.

ಅನ್ನ, ನೀರು ಹಾಗೂ ಶಿಕ್ಷಣದ ವಿಚಾರದಲ್ಲಿ ಯಾರು ಜಾತಿವಾದಿ
ಗಳಾಗಬಾರದು. ಮಧುಗಿರಿ ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕೆಂದು ಮುಖ್ಯಮಂತ್ರಿಗೆಅವರಿಗೆ ಮನವಿ ಮಾಡಲಾಗಿದೆ ಎಂದರು.

ADVERTISEMENT

ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.

ಮುರಳೀಧರ ಹಾಲಪ್ಪ ಅವರು ಧಾರ್ಮಿಕ, ಶೈಕ್ಷಣಿಕವಾಗಿ ಅನೇಕ ಸಹಾಯ ಮಾಡುತ್ತಿದ್ದು, ಅವರಿಗೆ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಉತ್ತಮ ಭವಿಷ್ಯವಿದೆ ಎಂದರು.

ಮುರಳೀಧರ ಹಾಲಪ್ಪ ಮಾತನಾಡಿ, ‘ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಸಂಸ್ಕಾರ ಕಲಿಯಬೇಕು. ಎಲ್ಲ ಶಾಲೆಗಳಲ್ಲೂ ಯೋಗ ಶಿಕ್ಷಣ ನೀಡುವುದರ ಜೊತೆಗೆ, ಭಾರತದ ಚರಿತ್ರೆ ಸಾರುವ ಹಾಗೂ ಸಂಸ್ಕಾರಗಳನ್ನು ಪಠ್ಯದಲ್ಲಿ ಅಳವಡಿಸಬೇಕು’ ಎಂದರು.

ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ, ಡಿವೈಎಸ್‌ಪಿ. ರಾಮಕೃಷ್ಣಪ್ಪ, ಡಾ.ಹಾಲಪ್ಪ, ಪುರಸಭೆ ಮಾಜಿ ಅಧ್ಯಕ್ಷ ಡಿ.ಜಿ.ಶಂಕರನಾರಾಯಣ ಶೆಟ್ಟಿ, ಸದಸ್ಯರಾದ ಎಂ.ಎಲ್.ಗಂಗರಾಜು, ಕೆ.ನಾರಾಯಣ್, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ರಾಜಶೇಖರ್, ರೋಟರಿ ಅಧ್ಯಕ್ಷ ಎಂ.ಶಿವಲಿಂಗಪ್ಪ, ಖಜಾಂಚಿ ಎಂ.ವೆಂಕಟರಾಮು, ನಿವೃತ್ತ ಶಿಕ್ಷಕ ಕೃಷ್ಣಚಾರ್, ಮುಖಂಡರಾದ ಎಂ.ಜಿ.ಶ್ರೀನಿವಾಸಮೂರ್ತಿ, ಡಾ.ಜಿ.ಕೆ.ಜಯರಾಮ್, ಬಿ.ಎಸ್.ಶ್ರೀನಿವಾಸ್, ಚೆನ್ನಿಗರಾಮಯ್ಯ, ಸಿದ್ದಪ್ಪ, ರಾಗಿಣಿ, ವೀಣಾ, ಕೆ.ಎನ್.ಶ್ರೀನಿವಾಸ ಮೂರ್ತಿ, ಮಂಜುನಾಥ್, ಕರಿಯಣ್ಣ, ಎಂ.ಎನ್.ನರಸಿಂಹಮೂರ್ತಿ, ಲೇಖಕ ತಿಮ್ಮಾಪುರ ನಟರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.