ADVERTISEMENT

ಸವಿತಾ ಮಹರ್ಷಿ ಜಯಂತಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2021, 16:23 IST
Last Updated 21 ಫೆಬ್ರುವರಿ 2021, 16:23 IST
ತಿಪಟೂರು ತಾಲ್ಲೂಕು ಕಚೇರಿಯಲ್ಲಿ ಸವಿತಾ ಮಹರ್ಷಿ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಿಸಲಾಯಿತು
ತಿಪಟೂರು ತಾಲ್ಲೂಕು ಕಚೇರಿಯಲ್ಲಿ ಸವಿತಾ ಮಹರ್ಷಿ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಿಸಲಾಯಿತು   

ತಿಪಟೂರು: ಸಮಾಜದ ಶೋಷಿತ ವರ್ಗದವರ ಅಭಿವೃದ್ಧಿಗೆ ಶ್ರಮಿಸಿದ ಮಹನೀಯರ ಆದರ್ಶಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಸವಿತಾ ಸಮಾಜದ ಮುಖಂಡ ಟಿ.ಸಿ.ಗೋವಿಂದರಾಜು ತಿಳಿಸಿದರು.

ತಾಲ್ಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಆಯೋಜಿಸಿದ್ದ ಸವಿತಾ ಮಹರ್ಷಿ ಹಾಗೂ ಛತ್ರಪತಿ ಶಿವಾಜಿ ಜಯಂತಿಯಲ್ಲಿ ಮಾತನಾಡಿದರು.

ಶಿವನ ಅಂಶದಿಂದ ಅವತರಿಸಿದ ಸವಿತಾ ಮಹರ್ಷಿಗಳ ಬದುಕಿನ ಪುರಾತನ ಕಲೆಗಳನ್ನು ಕಲಿಸಿ ಅವುಗಳನ್ನು ಮುಂದುವರೆಸಿಕೊಂಡು ಹೋಗುವಂತೆ ಮಾರ್ಗದರ್ಶನ ಮಾಡಿದರು.

ADVERTISEMENT

ಸಂಗೀತಾ, ಆರೋಗ್ಯ, ಸವಿತಾ ಸೇವೆಯನ್ನು ನಿರಂತರವಾಗಿ ಯಾವುದೇ ಬೇಧ, ಭಾವವಿಲ್ಲದೇ ಮಾಡುವ ಮನೋಭಾವನೆಯನ್ನು ಬೆಳೆಸಿದರು. ಅದೇ ರೀತಿ ದೇಶದ ಸಾಂಸ್ಕೃತಿಕ ಹಾಗೂ ಧರ್ಮ ಜಾಗೃತಿ ಮೂಡಿಸುವಲ್ಲಿ ಛತ್ರಪತಿ ಶಿವಾಜಿಯೂ ಒಬ್ಬರಾಗಿದ್ದಾರೆ ಎಂದರು.

ತಹಶೀಲ್ದಾರ್ ಆರ್.ಜೆ.ಚಂದ್ರಶೇಖರ್ ಮಾತನಾಡಿ, ಸರ್ಕಾರ ದೇಶಕ್ಕಾಗಿ, ಸಮಾಜಕ್ಕಾಗಿ, ಸಂಸ್ಕೃತಿ, ಧರ್ಮಕ್ಕಾಗಿ, ಮಾನವನ ಉದ್ದಾರಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಶ್ರೇಷ್ಠವಾದ ಆದರ್ಶ ಪುರುಷರನ್ನು ಗೌರವಿಸುವ ಹಾಗೂ ಯುವಪೀಳಿಗೆಗೆ ಇವರ ಸಂದೇಶಗಳನ್ನು ಕೊಂಡೊಯ್ಯುವ ಸದುದ್ದೇಶದಿಂದ ಜಯಂತಿಗಳ ಆಚರಣೆಗಳನ್ನು ಮಾಡಲಾಗುತ್ತಿದೆ ಎಂದರು.

ಗ್ರೇಡ್ 2 ತಹಶೀಲ್ದಾರ್ ಜಗನ್ನಾಥ್, ಶಿರಸ್ತೆದಾರ್ ಸಿ.ವಿ.ರವಿಕುಮಾರ್, ಸವಿತಾ ಸಮಾಜದ ತಾಲ್ಲೂಕು ಅಧ್ಯಕ್ಷ ಎ.ಲೋಕೇಶ್, ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಪ್ರಕಾಶ್, ನಿವೃತ್ತ ಉಪಾಧ್ಯಾಯ ವೆಂಕಟರಾಮಯ್ಯ, ಎಂ.ಸಿ.ಗೋವಿಂದರಾಜು, ನಾಗರಾಜು, ಎಸ್.ಕುಮಾರ್, ಸವಿತಾ ಯುವ ಘಟಕದ ಕಾರ್ತಿಕ್, ಟಿ.ಜೆ.ವರದರಾಜು, ಮಾರುತಿ, ತೇಜರಾಜು, ಪ್ರಧಾನ ಕಾರ್ಯ
ದರ್ಶಿ ವಿಜಯ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.