ADVERTISEMENT

ಚೇಳೂರು : ಗುಲಾಬಿ ಹೂವು ನೀಡುವುದರ ಮೂಲಕ ಶಾಲಾ ಮಕ್ಕಳಿಗೆ ಸ್ವಾಗತ

​ಪ್ರಜಾವಾಣಿ ವಾರ್ತೆ
Published 29 ಮೇ 2023, 14:14 IST
Last Updated 29 ಮೇ 2023, 14:14 IST
ತಾಲೂಕಿನ ಪಸುಫಲವಾರಪಲ್ಲಿ ಶಾಲಾ ಮಕ್ಕಳಿಗೆ ಗುಲಾಬಿ ಹೂವು ಗಳನ್ನು ನೀಡುವುದರ ಮೂಲಕ ಶಾಲೆಗೆ ಆತ್ಮೀಯವಾಗಿ ಸ್ವಾಗತಿಸಿದರು.
ತಾಲೂಕಿನ ಪಸುಫಲವಾರಪಲ್ಲಿ ಶಾಲಾ ಮಕ್ಕಳಿಗೆ ಗುಲಾಬಿ ಹೂವು ಗಳನ್ನು ನೀಡುವುದರ ಮೂಲಕ ಶಾಲೆಗೆ ಆತ್ಮೀಯವಾಗಿ ಸ್ವಾಗತಿಸಿದರು.   

ಚೇಳೂರು : ರಾಜ್ಯದಲ್ಲಿ ಸೋಮವಾರ ಸರ್ಕಾರಿ ಶಾಲೆಗಳು ಪುನರಾರಂಭಗೊಂಡಿವೆ. ತಾಲೂಕಿನಾದ್ಯಂತ ಎಲ್ಲಾ ಶಾಲೆಗಳಲ್ಲಿ ಹಬ್ಬದ ವಾತಾವರಣದ ಶಾಲಾ ಪ್ರಾರಂಭೋತ್ಸವ ಕಂಡುಬಂದಿತು.

ನಲ್ಲಗುಟ್ಲಪಲ್ಲಿ ಕ್ಲಸ್ಟರ್ ನ ಪಸುಫಲವಾರಪಲ್ಲಿ ಶಾಲೆಯನ್ನು ಸ್ವಚ್ಛಗೊಳಿಸಿ, ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಮೊದಲ ದಿನ ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಶಿಕ್ಷಕರು ಗುಲಾಬಿ ಹೂವು ಮತ್ತು ಸಿಹಿ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು. ಪೋಷಕರು ಮಕ್ಕಳನ್ನು ಸ್ವಚ್ಛವಾಗಿ ಶಾಲೆಗೆ ಕರೆದುಕೊಂಡು ಬಂದು ಶಾಲೆಯಲ್ಲಿ ಹೋಗುತ್ತಿರುವುದು ಸಾಮಾನ್ಯವಾಗಿ ಕಂಡು ಬಂತು.

ಮುಖ್ಯ ಶಿಕ್ಷಕ ವಿ.ಸತ್ಯನಾರಾಯಣ, ಲಕ್ಷ್ಮಿ ನಾರಾಯಣ, ನರಸಿಂಹಪ್ಪ,ಹಾಗೂ ಎಸ್ ಟಿಎಂಸಿ ಅಧ್ಯಕ್ಷ ನರಸಿಂಹಪ್ಪ,ಹಾಗೂ ಸದಸ್ಯರಾದ ಮಂಜುನಾಥ,ಅಂಜಿನಮ್ಮ,ಭಾಗ್ಯಮ್ಮ,ವೆಂಕಟೇಶ್, ಹಾಗೂ ಗ್ರಾಮಸ್ಥರು ಇದ್ದರು,

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.