ADVERTISEMENT

ತುಮಕೂರು | ಪ್ರತ್ಯೇಕ ಅಪಘಾತ: ಇಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 6:04 IST
Last Updated 30 ಜುಲೈ 2024, 6:04 IST

ತುಮಕೂರು: ತಾಲ್ಲೂಕು ವ್ಯಾಪ್ತಿಯಲ್ಲಿ ಸೋಮವಾರ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

ನಗರದ ಹೊರವಲಯದ ಹಿರೇಹಳ್ಳಿ ಬಳಿಯ ಟಿವಿಎಸ್‌ ಕ್ರಾಸ್‌ನಲ್ಲಿ ರಸ್ತೆ ದಾಟುತ್ತಿದ್ದ ನರಸಿಂಹಯ್ಯ (81) ಎಂಬುವರಿಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತುಮಕೂರು ಕಡೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರು ಟಿವಿಎಸ್‌ ಕ್ರಾಸ್‌ ಬಳಿ ಹಿರೇಹಳ್ಳಿಯತ್ತ ಹೋಗಲು ರಸ್ತೆ ದಾಟುತ್ತಿದ್ದಾಗ ಡಿಕ್ಕಿಯಾಗಿದೆ. ನರಸಿಂಹಯ್ಯ ತಾಲ್ಲೂಕಿನ ಸಿಂಗನಹಳ್ಳಿ ನಿವಾಸಿ. ಕ್ಯಾತ್ಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಘಟನೆ: ಮಲ್ಲಸಂದ್ರ ಬಳಿ ಕಾರು ಮತ್ತು ಬೈಕ್‌ ಮಧ್ಯೆ ನಡೆದ ಅಪಘಾತದಲ್ಲಿ ಬೈಕ್‌ ಸವಾರ ನಾಗೇಶ್‌ (59) ಮೃತಪಟ್ಟಿದ್ದಾರೆ. ಮೃತರು ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಬಾಗೂರು ಹೋಬಳಿಯ ಅಣತಿ ಕೋಡಿಹಳ್ಳಿ ನಿವಾಸಿ. ಹೆಗ್ಗೆರೆಯ ಮಗಳ ಮನೆಗೆ ಬಂದಿದ್ದರು. ಅಲ್ಲಿಂದ ಮಲ್ಲಸಂದ್ರದ ಕಡೆಗೆ ಹೋಗುವಾಗ ಅಪಘಾತವಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.