ADVERTISEMENT

ಶಿರಾ ನಗರಸಭೆ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಸಾವಿನಿಂದ ಮತದಾನ ರದ್ದು

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2021, 8:50 IST
Last Updated 25 ಡಿಸೆಂಬರ್ 2021, 8:50 IST
ಚಾಂದ್ ಪಾಷ
ಚಾಂದ್ ಪಾಷ   

ಶಿರಾ: ನಗರಸಭೆ ವಾರ್ಡ್ ನಂ 21ರ ಕಾಂಗ್ರೆಸ್‌ ಅಭ್ಯರ್ಥಿ ಚಾಂದ್ ಪಾಷ (72) ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದು, ಮತದಾನವನ್ನು ರದ್ದು ಪಡಿಸಲಾಗಿದೆ.

ಸೋಮವಾರ ಮತದಾನ ನಡೆಯಬೇಕಿತ್ತು. 21ನೇ ವಾರ್ಡ್ ಚುನಾವಣೆಯನ್ನು ಮಾತ್ರ ರದ್ದುಪಡಿಸಲಾಗಿದೆ. ಇತರೆ ವಾರ್ಡ್‌ಗಳ ಚುನಾವಣೆ ಎಂದಿನಂತೆ ನಡೆಯಲಿದೆ.

ಡಿ.27ರಂದು ನಡೆಯುವ ನಗರಸಭೆ ಚುನಾವಣೆಯಲ್ಲಿ 21ನೇ ವಾರ್ಡ್‌ನಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಚಾಂದ್ ಪಾಷ (72) ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.

ADVERTISEMENT

ಇವರು ಶಿರಾ ನಗರಸಭೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಜಾಮಿಯಾ ಮಸೀದಿ ಮುತ್ವಲ್ಲಿಯಾಗಿ ಸೇವೆ ಸಲ್ಲಿಸುತ್ತಿದ್ದರು. ನಟರಾಜ್ ಬೀಡಿ ಮಾಲೀಕರಾಗಿದ್ದು, ಆರ್.ರೆಹಾನ್ ಶಿಕ್ಷಣ ಸಂಸ್ಥೆಯ ಮೂಲಕ ಜನಪರ ಸೇವೆ ಮಾಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.