ಶಿರಾ: ನಗರದ ಜನರಿಗೆ ಕುಡಿಯುವ ನೀರು ಒದಗಿಸುವ ದೊಡ್ಡ ಕೆರೆ ಬುಧವಾರ ರಾತ್ರಿ ತುಂಬಿ ಕೋಡಿ ಬಿದ್ದಿರುವುದು ಜನರಲ್ಲಿ ಹರ್ಷ ಮೂಡಿಸಿದೆ.
ದೊಡ್ಡ ಕೆರೆಗೆ ಹೇಮಾವತಿ ನೀರು ಹರಿದ ಬಂದ ಹಿನ್ನೆಲೆಯಲ್ಲಿ ಕೆರೆ ತುಂಬಿ ಕೋಡಿ ಹರಿದಿದೆ. ಇದರಿಂದಾಗಿ ಒಂದು ವರ್ಷ ನಗರದಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದು ಎಂಬ ಭರವಸೆ ಹುಟ್ಟಿಸಿದೆ.
ಸತತ ಬರಗಾಲದಿಂದಾಗಿ ಕುಡಿಯುವ ನೀರಿಗೆ ಸಂಕಷ್ಟ ಪಡುತ್ತಿದ್ದ ನಗರದ ಜನರಿಗೆ 2004ರಿಂದ ಹೇಮಾವತಿ ನೀರು ಸತತವಾಗಿ ಹರಿದು ಬರುತ್ತಿದ್ದು ಕುಡಿಯುವ ನೀರಿನ ದಾಹ ತೀರಿಸಿದೆ.
ನಗರಕ್ಕೆ ಹೇಮಾವತಿ ನೀರು ಹರಿದು ಬಂದ ನಂತರ ಕುಡಿಯುವ ನೀರಿನ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದಿದೆ. ಆದರೆ ಕುಡಿಯುವ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ನಗರಸಭೆ ವಿಫಲವಾಗಿದ್ದು, ಬಹುತೇಕ ಕಡೆ ಕುಡಿಯುವ ನೀರನ್ನು ವ್ಯರ್ಥ ಮಾಡುತ್ತಿದ್ದರೂ ನಗರಸಭೆ ಕಣ್ಣು ಮುಚ್ವಿ ಕುಳಿತಿದೆ ಎಂದು ನಗರ ನಿವಾಸಿಗಳು ಆರೋಪಿಸಿದ್ದಾರೆ.
ಶಿರಾ ಹಾಗೂ ಕಳ್ಳಂಬೆಳ್ಳ ಕೆರೆ ಈಗಾಗಲೇ ಭರ್ತಿಯಾಗಿರುವುದರಿಂದ ಮುಂದಿನ ದಿನಗಳಲ್ಲಿ ನೀರು ಮದಲೂರು ಕೆರೆಗೆ ಹರಿಸುವ ನಿರೀಕ್ಷೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.