ADVERTISEMENT

ಸಿದ್ದಗಂಗಾ ಮಠ: ಶಿವಕುಮಾರ ಸ್ವಾಮಿ ಅವರ 114ನೇ ವರ್ಷದ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2021, 3:58 IST
Last Updated 1 ಏಪ್ರಿಲ್ 2021, 3:58 IST
   

ತುಮಕೂರು: ಸಿದ್ದಗಂಗಾ ಮಠದಲ್ಲಿ ಗುರುವಾರ ಬೆಳಿಗ್ಗೆ ಶಿವಕುಮಾರ ಸ್ವಾಮೀಜಿ 114ನೇ ವರ್ಷದ ಜಯಂತಿಯನ್ನು ಕೋವಿಡ್-19ನಿಂದಾಗಿ ಸರಳವಾಗಿ ಆಚರಿಸಲಾಯಿತು.

ಮಠಾಧೀಶರಾದ ಸಿದ್ಧಲಿಂಗ ಸ್ವಾಮೀಜಿ ಅವರು ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಪೂಜೆ ಸಲ್ಲಿಸಿದರು. ನಂತರ ಇತರ ಸ್ವಾಮೀಜಿಗಳು, ಭಕ್ತರು ಪೂಜೆ ನೆರವೇಸಿದರು.

ರಾಜ್ಯದ ಇತರ ಭಾಗಗಳಿಂದ ಬರುತ್ತಿರುವ ಭಕ್ತರು ಸ್ವಾಮೀಜಿ ಗದ್ದುಗೆ ದರ್ಶನ ಪಡೆದು ನಮಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.