ADVERTISEMENT

ವೈದ್ಯ ವೃತ್ತಿ ಬಿಟ್ಟು ರಾಜಕೀಯ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2020, 16:59 IST
Last Updated 11 ನವೆಂಬರ್ 2020, 16:59 IST
ಕುಟುಂಬದೊಂದಿಗೆ ರಾಜೇಶ್‌ಗೌಡ
ಕುಟುಂಬದೊಂದಿಗೆ ರಾಜೇಶ್‌ಗೌಡ   

ಶಿರಾ: ತಾಲ್ಲೂಕಿನಲ್ಲಿ ಮೂರು ವರ್ಷದಿಂದ ಸಾಮಾಜಿಕ ಕಾರ್ಯಗಳ ಮೂಲಕ ಗುರುತಿಸಿಕೊಂಡಿದ್ದ ಡಾ.ಸಿ.ಎಂ.ರಾಜೇಶ್ ಗೌಡ ಅವರು ಈಗ ಶಿರಾ ಶಾಸಕರು.

ಮಾಜಿ ಸಂಸದ,ತಾಲ್ಲೂಕಿನ ಚಿರತಹಳ್ಳಿ ಗ್ರಾಮದ ಸಿ.ಪಿ.ಮೂಡಲಗಿರಿಯಪ್ಪ ಪುತ್ರನಾದ ರಾಜೇಶ್ ಅವರದ್ದು ರಾಜಕೀಯ ಹಿನ್ನಲೆಯ ಕುಟುಂಬ.

ಮೂಡಲಗಿರಿಯಪ್ಪ ಮೂರು ಬಾರಿ ಚಿತ್ರದುರ್ಗ ಕ್ಷೇತ್ರದ ಸಂಸದರಾಗಿ ಹಾಗೂ ಒಮ್ಮೆ ಶಿರಾ ಕ್ಷೇತ್ರದ ಶಾಸಕರಾಗಿದ್ದರು.

ADVERTISEMENT

ಬೆಂಗಳೂರಿನ ಆದಿಚುಂಚನಗಿರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿದ ನಂತರ ರಾಜೇಶ್‌ ಅಲ್ಲಿಯೇ ರೇಡಿಯೊ ಡಯಾಗ್ನೋಸಿಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಸಂಸ್ಥೆಯಲ್ಲಿಯೇ ಹಿರಿಯ ಉಪನ್ಯಾಸಕ ಮತ್ತು ಸಲಹೆಗಾರರಾಗಿ 2004ರಿಂದ 2009ರವರೆಗೆ ಕಾರ್ಯನಿರ್ವಹಿಸಿದ್ದರು.

ಬಳಿಕ ಮ್ಯಾಟ್ರಿಕ್ಸ್ ಇಮೇಜಿಂಗ್ ಸೊಲ್ಯೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಪ್ರಾರಂಭಿಸಿ ಇದರ ಮೂಲಕ ಭಾರತ ಮತ್ತು ಕರ್ನಾಟಕದ ವಿವಿಧ ಸರ್ಕಾರಿ ಆಸ್ಪತ್ರೆಗಳಿಗೆ ಲ್ಯಾಬೊರೇಟರಿ ಮತ್ತು ರೇಡಿಯೊ ಡಯಾಗ್ನೋಸಿಸ್ ಮಾಡುತ್ತಿದ್ದಾರೆ.

ಬೆಂಗಳೂರು ವೈದ್ಯಕೀಯ ಕಾಲೇಜಿನ ಪ್ರಧಾನಮಂತ್ರಿ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪ್ರಯೋಗಾಲಯ ಮತ್ತು ಸಂಪೂರ್ಣ ರೇಡಿಯೊ ಡಯಾಗ್ನೋಸಿಸ್ ಸೇವೆಗಳನ್ನು ಒದಗಿಸುತ್ತಿದ್ದಾರೆ. ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.