ADVERTISEMENT

ಶಿರಾ ಉಪಚುನಾವಣೆ: ಮುನ್ನಡೆ ಕಾಯ್ದುಕೊಳ್ಳುತ್ತಲೇ ಸಾಗಿದ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2020, 6:38 IST
Last Updated 10 ನವೆಂಬರ್ 2020, 6:38 IST
ಶಿರಾದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ
ಶಿರಾದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ   

ತುಮಕೂರು: ಶಿರಾ ಉಪಚುನಾವಣೆಯ ಎಂಟು ಸುತ್ತುಗಳಲ್ಲೂ ಬಿಜೆಪಿ ಮುನ್ನಡೆ ಸಾಧಿಸಿದೆ. 7ನೇ ಸುತ್ತಿನಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ಮತ ಮುನ್ನಡೆ ಪಡೆಯುವ ಮೂಲಕ ಅಂತರ ಸಹ ಹೆಚ್ಚಿಸಿಕೊಂಡಿದೆ.

ಬಿಜೆಪಿಗೆ ಲೀಡ್ ಹೆಚ್ಚಾದಷ್ಟು ಆ ಪಕ್ಷದ ಕಾರ್ಯಕರ್ತರು ಬಿ.ಎಚ್.ರಸ್ತೆಯಲ್ಲಿ ಜಯದ ಘೋಷಣೆ ಮೊಳಗಿಸುತ್ತಿದ್ದಾರೆ. ವಿಜಯದ ಸಂಕೇತ ತೋರುತಿದ್ದಾರೆ.

ಶಿರಾ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಮುನ್ನಡೆ ಹೆಚ್ಚಿಸಿಕೊಳ್ಳುತ್ತಿರುವಂತೆ ಮತ ಎಣಿಕೆ ನಡೆಯುತ್ತಿರುವ ಪಾಲಿಟೆಕ್ನಿಕ್ ಕಾಲೇಜು ಬಳಿಯ ಬಿ‌.ಎಚ್.ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಜಮಾಯಿಸುತ್ತಿದ್ದಾರೆ. ಜಯಘೋಷ ಹೆಚ್ಚಿದೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.