ADVERTISEMENT

ವೆಂಟಿಲೇಟರ್‌ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲ: ಜಿ. ಪರಮೇಶ್ವರ ಆರೋಪ

​ಪ್ರಜಾವಾಣಿ ವಾರ್ತೆ
Published 5 ಜೂನ್ 2021, 5:37 IST
Last Updated 5 ಜೂನ್ 2021, 5:37 IST
ಶಾಸಕ ಪರಮೇಶ್ವರ ಕೊರೊನಾ ವಾರಿಯರ್ಸ್‌ಗಳಿಗೆ ದಿನಸಿ ಕಿಟ್‌ ವಿತರಿಸಿದರು
ಶಾಸಕ ಪರಮೇಶ್ವರ ಕೊರೊನಾ ವಾರಿಯರ್ಸ್‌ಗಳಿಗೆ ದಿನಸಿ ಕಿಟ್‌ ವಿತರಿಸಿದರು   

ಕೊರಟಗೆರೆ: ಬಡ ಜನರ ತುರ್ತು ಆರೋಗ್ಯ ರಕ್ಷಣೆಗಾಗಿ ಪ್ರಧಾನ ಮಂತ್ರಿ ನಿಧಿಯಿಂದ ರಾಜ್ಯಕ್ಕೆ ಬಂದಿದ್ದ 2,913 ವೆಂಟಿಲೇಟರ್‌ಗಳನ್ನು ನಿರ್ವಹಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಶಾಸಕ ಡಾ.ಜಿ. ಪರಮೇಶ್ವರ ಆರೋಪಿಸಿದರು.

ಕೊರೊನಾ ವಾರಿಯರ್ಸ್‌ಗಳಿಗೆ ದಿನಸಿ ಕಿಟ್‌ ವಿತರಿಸಿ ಮಾತನಾಡಿದರು.

ವೆಂಟಿಲೇಟರ್ ಕಳಪೆ ಗುಣಮಟ್ಟ ಮತ್ತು ತಾಂತ್ರಿಕ ಸಮಸ್ಯೆಯಿಂದ ಕೂಡಿವೆ. ಅವುಗಳ ನಿರ್ವಹಣೆಗೆ ಸಿಬ್ಬಂದಿಕೊರತೆಯಿದೆ. ನುರಿತ ವೈದ್ಯರ ಹುದ್ದೆಗಳು ಸಂಪೂರ್ಣ ಖಾಲಿ ಇವೆ. ಕೇಂದ್ರ ಸರ್ಕಾದ ವಿರುದ್ಧ ರಾಜ್ಯ ಸರ್ಕಾರದ ನಾಯಕರು ಮಾತನಾಡದೇ ಮೌನಕ್ಕೆ ಶರ
ಣಾಗಿದ್ದಾರೆ. ಇದರಿಂದಾಗಿ ರಾಜ್ಯದ ಜನರಿಗೆ ತೊಂದರೆಯಾಗುತ್ತಿದೆಎಂದರು.

ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಿ, ಪಿಯಿಸಿ ಪರೀಕ್ಷೆ ರದ್ದು ಪಡಿಸಿರುವುದು ಅವೈಜ್ಞಾನಿಕ ಕ್ರಮ. ಸೋಂಕು ಹರಡುವಿಕೆ ತಡೆಯಲು ಇನ್ನೆರಡು ವಾರ ಲಾಕ್‌ಡೌನ್ ಅನಿವಾರ್ಯ. ಜೊತೆಗೆ ಜನರ ಸಂಕಷ್ಟಕ್ಕೂ ಪರಿಹಾರ ಸೂಚಿಸಬೇಕು. ದಿನಗೂಲಿ ನೌಕರರು, ಆಟೊ, ಟ್ಯಾಕ್ಸಿ ಚಾಲಕರು ಹಾಗೂ ಬಡವರಿಗೆ ಘೋಷಣೆ ಮಾಡಿರುವ ಪರಿಹಾರ ಹಣ ಇನ್ನೂ ತಲುಪಿಲ್ಲ. ಅದನ್ನು ಕೂಡಲೇ ನೀಡಬೇಕು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಡಿಕಲ್ ಅಶ್ವತ್ಥ್, ಅರಕೆರೆ ಶಂಕರ್, ಪಟ್ಟಣ ಪಂಚಾಯಿತಿ ಸದಸ್ಯರಾದ ಎ.ಡಿ.ಬಲರಾಮಯ್ಯ, ಕೆ.ಆರ್.ಓಬಳರಾಜು, ನಂದಿಶ್, ನಾಗರಾಜು, ತಹಶೀಲ್ದಾರ್ ಬಿ.ಎಂ.ಗೋವಿಂದರಾಜು, ತಾ.ಪಂ. ಆಡಳಿತಾಧಿಕಾರಿ ಟಿ.ಎನ್. ಅಶೋಕ್, ಟಿಎಚ್ಓ ವಿಜಯ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.