ತುಮಕೂರು: ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘ, ಬೆಂಗಳೂರಿನ ಸ್ವಾಮಿ ವಿವೇಕಾನಂದ ಶಿಕ್ಷಕರ ಫೌಂಡೇಶನ್ ಆಶ್ರಯದಲ್ಲಿ ಪ್ರೌಢಶಾಲೆ ಮುಖ್ಯ ಶಿಕ್ಷಕರು, ಶಿಕ್ಷಕರಿಗೆ ‘ಮೇಕ್ ಮೆನ್– ಮೇಕ್ ನೇಷನ್’ ಎಂಬ ಶೈಕ್ಷಣಿಕ ಕಾರ್ಯಾಗಾರವನ್ನು ಮೇ 20 ಹಾಗೂ 21ರಂದು ನಗರದ ರಾಮಕೃಷ್ಣ– ವಿವೇಕಾನಂದ ಆಶ್ರಮದಲ್ಲಿ ಹಮ್ಮಿಕೊಳ್ಳಲಾಗಿದೆ.
ಮೇ 20ರಂದು ಬೆಳಿಗ್ಗೆ 9.30ಕ್ಕೆ ವಿಜಯಪುರ ರಾಮಕೃಷ್ಣ– ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತೀ ಉದ್ಘಾಟಿಸಿ ‘ಗುರೋರಧಿಕಂ ತತ್ತ್ವಂ’ ಕುರಿತು ಉಪನ್ಯಾಸ ನೀಡಲಿದ್ದಾರೆ. ಭವತಾರಿಣಿ ಆಶ್ರಮದ ಅಧ್ಯಕ್ಷೆ ವಿವೇಕಮಯೀ ‘ಗುರುವೆಂದರೆ ಲಘುವಲ್ಲ’, ಸ್ವಾಮಿ ವಿವೇಕಾನಂದ ಶಿಕ್ಷಕರ ಫೌಂಡೇಶನ್ ನಿರ್ದೇಶಕ ಟಿ.ವಿ.ರಾಜು ‘ವೈವಿಧ್ಯಮಯ ಜವಾಬ್ದಾರಿಗಳು; ವೈಶಿಷ್ಟ್ಯಪೂರ್ಣ ನಿರ್ವಹಣೆ’, ಮೈಸೂರಿನ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಸ್ವಾಮಿ ಮಹಾಮೇಧಾನಂದಜೀ ‘ವೈವಿಧ್ಯಮಯ ಸವಾಲುಗಳು; ವೈಶಿಷ್ಟ್ಯಮಯ ಪರಿಹಾರಗಳು’ ಕುರಿತು ಉಪನ್ಯಾಸ ನೀಡುವರು.
ಮೇ 21ರಂದು ಬೆಳಿಗ್ಗೆ 10 ಗಂಟೆಗೆ ಪ್ರೊ.ಕೆ.ವಿ.ಅನಸೂಯ ‘ನೀತಿ ಶಿಕ್ಷಣ ನೀಡಲು ಶಿಕ್ಷಣ ನೀತಿಯ ಆದೇಶವು ಅನಿವಾರ್ಯವೇ’, ಪ್ರೊ.ಬಿ.ವೈ.ತೇಜಸ್ವಿನಿ ‘ಚಾರಿತ್ರ್ಯವಂತರೇ ಚರಿತ್ರೆಯ ನಿರ್ಮಾತೃಗಳು’, ಸ್ವಾಮಿ ಪರಮಾನಂದಜೀ ‘ಅವನಿಯ ಶಿಶು ನಾನು’, ಸ್ವಾಮಿ ವೀರೇಶಾನಂದ ಸರಸ್ವತೀ ‘ಶಾಲೆ– ಸಾಮಾನ್ಯನನ್ನು ಅಸಾಮಾನ್ಯನನ್ನಾಗಿಸುವ ಗರಡಿಮನೆ’ ಕುರಿತು ಉಪನ್ಯಾಸ ನೀಡಲಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಸ್ವಾಮಿ ಮುಕ್ತಿದಾನಂದಜೀ ದಿಕ್ಸೂಚಿ ಭಾಷಣ ಮಾಡುವರು. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮನಮೋಹನ, ಮಂಜುನಾಥ್, ಗಿರಿಜಾ, ಎಚ್.ಆರ್.ಗಂಗಾಧರ್, ಬಿಇಒ ಹನುಮಂತರಾಯಪ್ಪ, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್ ಭಾಗವಹಿಸುವರು. ಮಾಹಿತಿಗೆ ಮೊ 9945696532, 8147139354 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.