ADVERTISEMENT

ಮಹಿಳೆಯರ ಏಳ್ಗೆ ಪ್ರಗತಿಗೆ ಪೂರಕ

ಧಾನ್‌ ಫೌಂಡೇಷನ್‌ ಬೆಳ್ಳಿ ಹಬ್ಬದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 3:34 IST
Last Updated 26 ಅಕ್ಟೋಬರ್ 2021, 3:34 IST
ಪಾವಗಡದಲ್ಲಿ ಭಾನುವಾರ ನಡೆದ ಧಾನ್ ಫೌಂಡೇಷನ್ ಸಂಸ್ಥೆಯ ಬೆಳ್ಳಿ ಹಬ್ಬದ ಕಾರ್ಯಕ್ರಮವನ್ನು ಮಹಿಳಾ ಕಳಂಜಿಯಂ ಒಕ್ಕೂಟದ ಅಧ್ಯಕ್ಷೆ ರತ್ನಮ್ಮ ಉದ್ಘಾಟಿಸಿದರು. ತಾಲ್ಲೂಕು ಸಂಯೋಜಕ ಬಿ.ಎಂ. ರಾಮಚಂದ್ರ, ಸಂಯೋಜಕ ಆಲ್ಕೂರಪ್ಪ, ಅಲುವೇಲಮ್ಮ, ಲಕ್ಷ್ಮಿದೇವಮ್ಮ, ನವೀನ್ ಕುಮಾರಿ, ಮಂಜುಳಾ, ವಿಜಯಾ ಉಪಸ್ಥಿತರಿದ್ದರು
ಪಾವಗಡದಲ್ಲಿ ಭಾನುವಾರ ನಡೆದ ಧಾನ್ ಫೌಂಡೇಷನ್ ಸಂಸ್ಥೆಯ ಬೆಳ್ಳಿ ಹಬ್ಬದ ಕಾರ್ಯಕ್ರಮವನ್ನು ಮಹಿಳಾ ಕಳಂಜಿಯಂ ಒಕ್ಕೂಟದ ಅಧ್ಯಕ್ಷೆ ರತ್ನಮ್ಮ ಉದ್ಘಾಟಿಸಿದರು. ತಾಲ್ಲೂಕು ಸಂಯೋಜಕ ಬಿ.ಎಂ. ರಾಮಚಂದ್ರ, ಸಂಯೋಜಕ ಆಲ್ಕೂರಪ್ಪ, ಅಲುವೇಲಮ್ಮ, ಲಕ್ಷ್ಮಿದೇವಮ್ಮ, ನವೀನ್ ಕುಮಾರಿ, ಮಂಜುಳಾ, ವಿಜಯಾ ಉಪಸ್ಥಿತರಿದ್ದರು   

ಪಾವಗಡ: ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಿ ಮಹಿಳೆಯರು ಸಾಲ ಸೌಲಭ್ಯ ಪಡೆದು ಆರ್ಥಿಕವಾಗಿ ಸದೃಢರಾಗಬೇಕು ಎಂದು ಮಹಿಳಾ ಕಳಂಜಿಯಂ ಒಕ್ಕೂಟದ ಅಧ್ಯಕ್ಷೆ ರತ್ನಮ್ಮ ತಿಳಿಸಿದರು.

ಪಟ್ಟಣದಲ್ಲಿ ಭಾನುವಾರ ನಡೆದ ಧಾನ್‌ ಫೌಂಡೇಶನ್‌ ಬೆಳ್ಳಿ ಹಬ್ಬದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕ್ರಿಯಾಶೀಲರಾಗಿದ್ದಾರೆ. ಗ್ರಾಮೀಣ ಮಹಿಳೆಯರು ಕೃಷಿ ಕೆಲಸದ ಜೊತೆಗೆ ಇತರೆ ಗುಡಿ ಕೈಗಾರಿಕೆ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇದರೊಟ್ಟಿಗೆ ಬ್ಯಾಂಕ್‌ಗಳ ಸಹಕಾರದೊಂದಿಗೆ ಬೃಹತ್ ಯೋಜನೆ ಆರಂಭಿಸುವತ್ತ ಗಮನಹರಿಸಬೇಕು. ಇದು ದೇಶದ ಅಭಿವೃದ್ಧಿಗೂ ಸಹಕಾರಿ ಎಂದು ಹೇಳಿದರು.

ADVERTISEMENT

ಕಳೆದ 25 ವರ್ಷಗಳಲ್ಲಿ ಧಾನ್ ಸಂಸ್ಥೆ ದೇಶದಲ್ಲಿ 25 ಲಕ್ಷ ಸದಸ್ಯರಿಗೆ ಸಾಲ ಸೌಲಭ್ಯ ಕೊಡಿಸಿದೆ. ಕಡಿಮೆ ಬಡ್ಡಿಗೆ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಕೊಡಿಸಿ ಮಹಿಳೆಯರು ಅರ್ಥಿಕವಾಗಿ ಸಬಲರಾಗಲು ಸಂಸ್ಥೆ ಶ್ರಮಿಸುತ್ತಿದೆ ಎಂದು ತಿಳಿಸಿದರು.

ತಾಲ್ಲೂಕು ಸಂಯೋಜಕ ಬಿ.ಎಂ. ರಾಮಚಂದ್ರ, ಸಂಸ್ಥೆಯಿಂದ ಸಂಘದ ಸದಸ್ಯರಿಗೆ ಜೀವ ವಿಮೆ, ಕೃಷಿ ಸಲಕರಣೆಗಳು, ತರಕಾರಿ, ಸಿರಿಧಾನ್ಯ ಬೀಜಗಳನ್ನು ಕಾಲಕಾಲಕ್ಕೆ ಪೂರೈಸಲಾಗುತ್ತಿದೆ. ಈವರೆಗೆ ₹ 5 ಕೋಟಿ ಉಳಿತಾಯವಾಗಿದೆ ಎಂದು ತಿಳಿಸಿದರು.

ಸಂಯೋಜಕ ಆಲ್ಕೂರಪ್ಪ, ತಾಲ್ಲೂಕು ರೈತ ಉತ್ಪಾದಕರ ಸಂಘದ ಅಧ್ಯಕ್ಷ ಎಚ್. ರಾಮಚಂದ್ರಯ್ಯ, ಮಹಿಳಾ ಒಕ್ಕೂಟದ ನಿರ್ದೇಶಕಿ ಗುಂಡಮ್ಮ ಮಾತನಾಡಿದರು. ನಿರ್ದೇಶಕರಾದ ಆಶ್ವಥ್ ನಾರಾಯಣ, ಎಚ್.ವಿ. ಉಮೇಶ್, ಅಲುವೇಲಮ್ಮ, ಲಕ್ಷ್ಮಿದೇವಮ್ಮ, ನವೀನ್ ಕುಮಾರಿ, ಮಂಜುಳಾ, ವಿಜಯಾ, ಅನಿತಾ, ಕೃಷ್ಣಮ್ಮ, ಭಾಗ್ಯಮ್ಮ, ಈರಮ್ಮ, ರಾಧಮ್ಮ, ರೂಪಾ, ಹನುಮಂತರಾಯ, ಸರೋಜಮ್ಮ, ಮಹಾಲಕ್ಷ್ಮಿ ಗೀರಿಜಮ್ಮ, ಶಿವಮ್ಮ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.