ADVERTISEMENT

ತುಮಕೂರು | 'ವಿ.ವಿ ಕ್ಯಾಂಪಸ್‍ನಲ್ಲಿ 20 ಸಾವಿರ ಗಿಡ'

​ಪ್ರಜಾವಾಣಿ ವಾರ್ತೆ
Published 6 ಜೂನ್ 2024, 5:21 IST
Last Updated 6 ಜೂನ್ 2024, 5:21 IST
ತುಮಕೂರು ವಿ.ವಿ ಬಿದರೆಕಟ್ಟೆ ಕ್ಯಾಂಪಸ್‍ನಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಗಿಡ ನೆಟ್ಟರು. ಪ್ರೊ.ಕೆ.ಸಿದ್ದಪ್ಪ, ಪ್ರೊ.ಕೆ.ಪ್ರಸನ್ನ ಕುಮಾರ್, ವಿ.ದ್ವಾರಕಾನಾಥ್ ಪಾಲ್ಗೊಂಡಿದ್ದರು
ತುಮಕೂರು ವಿ.ವಿ ಬಿದರೆಕಟ್ಟೆ ಕ್ಯಾಂಪಸ್‍ನಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಗಿಡ ನೆಟ್ಟರು. ಪ್ರೊ.ಕೆ.ಸಿದ್ದಪ್ಪ, ಪ್ರೊ.ಕೆ.ಪ್ರಸನ್ನ ಕುಮಾರ್, ವಿ.ದ್ವಾರಕಾನಾಥ್ ಪಾಲ್ಗೊಂಡಿದ್ದರು   

ತುಮಕೂರು: ಬಿದರೆಕಟ್ಟೆಯಲ್ಲಿ ನಿರ್ಮಾಣವಾಗಿರುವ ವಿಶ್ವವಿದ್ಯಾಲಯ ನೂತನ ಕ್ಯಾಂಪಸ್ ‘ಜ್ಞಾನಸಿರಿ’ಯಲ್ಲಿ 20 ಸಾವಿರ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದು ವಿ.ವಿ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ಹೇಳಿದರು.

ವಿ.ವಿಯ ಬಿದರೆಕಟ್ಟೆ ಕ್ಯಾಂಪಸ್‍ನಲ್ಲಿ ಸ್ನಾತಕೋತ್ತರ ಪರಿಸರ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ನೆಡುವುದರ ಮೂಲಕ ಚಾಲನೆ ನೀಡಿದರು.

ವಿಪ್ರೋ ಸಂಸ್ಥೆಯು ವಿ.ವಿ ಸಹಯೋಗದೊಂದಿಗೆ ಕ್ಯಾಂಪಸ್‍ನಲ್ಲಿ ಜೀವವೈವಿಧ್ಯ ಅಭಯಾರಣ್ಯ ಸ್ಥಾಪಿಸುವ ಒಪ್ಪಂದಕ್ಕೆ ಸಹಿ ಹಾಕಿದೆ. ಇದರ ಭಾಗವಾಗಿ ಮುಂದಿನ ವಾರ 400 ಗಿಡ ನೆಡಲಾಗುತ್ತಿದೆ ಎಂದರು.

ADVERTISEMENT

ವೃಕ್ಷಮಿತ್ರ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಕೆ.ಸಿದ್ದಪ್ಪ ನೇತೃತ್ವದಲ್ಲಿ 20 ಬೇವಿನ ಸಸಿಗಳನ್ನು ನೆಡಲಾಯಿತು. ವಿ.ವಿ ರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್, ಕಾರ್ಯಪಾಲಕ ಎಂಜಿನಿಯರ್ ಜಿ.ಆರ್.ಸುರೇಶ್, ಸ್ನಾತಕೋತ್ತರ ಪರಿಸರ ವಿಜ್ಞಾನ ಅಧ್ಯಯನ ವಿಭಾಗದ ಸಂಯೋಜಕ ವಿ.ದ್ವಾರಕಾನಾಥ್, ವಿಜ್ಞಾನ ನಿಕಾಯದ ಡೀನ್ ಪ್ರೊ.ಮನೋಹರ ಶಿಂಧೆ, ಇನ್ನಿತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.