ADVERTISEMENT

ಶಿರಾ: ಬೆಂಕಿ‌ ತಗುಲಿ ಮನೆಯಲ್ಲಿದ್ದ ವಸ್ತು ಭಸ್ಮ

​ಪ್ರಜಾವಾಣಿ ವಾರ್ತೆ
Published 23 ಮೇ 2025, 13:17 IST
Last Updated 23 ಮೇ 2025, 13:17 IST
ಶಿರಾ ತಾಲ್ಲೂಕಿನ ಎಂ.ದಾಸರಹಳ್ಳಿ ಗ್ರಾಮದಲ್ಲಿ ಗೋವಿಂದಪ್ಪ ಅವರ ಮನೆಗೆ ಬೆಂಕಿ ತಗಲಿ ಸಾಮಗ್ರಿ ಸುಟ್ಟುಹೋಗಿವೆ
ಶಿರಾ ತಾಲ್ಲೂಕಿನ ಎಂ.ದಾಸರಹಳ್ಳಿ ಗ್ರಾಮದಲ್ಲಿ ಗೋವಿಂದಪ್ಪ ಅವರ ಮನೆಗೆ ಬೆಂಕಿ ತಗಲಿ ಸಾಮಗ್ರಿ ಸುಟ್ಟುಹೋಗಿವೆ   

ಶಿರಾ: ತಾಲ್ಲೂಕಿನ ಎಂ.ದಾಸರಹಳ್ಳಿಯ ಗೋವಿಂದಪ್ಪ ಅವರ ಮನೆಯಲ್ಲಿ ಗುರುವಾರ ಅಡಿಗೆ ಅನಿಲ ಸೋರಿಕೆ ಅಥವಾ ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದಾಗಿ ಬೆಂಕಿ ಬಿದ್ದು ಮನೆಯಲ್ಲಿದ್ದ ಎಲ್ಲ ವಸ್ತುಗಳು ಸುಟ್ಟು ಹೋಗಿವೆ.

ಗುರುವಾರ ಸಂಜೆ ಮನೆಯಲ್ಲಿ ಅಡುಗೆ ಮಾಡಲು ಗ್ಯಾಸ್ ಸ್ಟವ್ ಮೇಲೆ ನೀರಿಟ್ಟು ಹೊರಗೆ ಬಂದಿದ್ದ ಸಮಯದಲ್ಲಿ ಮನೆಯಲ್ಲಿ ದುರ್ವಾಸನೆ ಬರುವುದನ್ನು ಕಂಡು ಒಳಗೆ ಹೋಗಿ ನೋಡಿದಾಗ ಗ್ಯಾಸ್‌ಪೈಪ್‌ ಸುಟ್ಟು ಬೆಂಕಿ ಹತ್ತಿಕೊಂಡಿರುವುದನ್ನು ಕಂಡಿದೆ. ಬೆಂಕಿ ನಂದಿಸಲು ನೀರನ್ನು ಹಾಕಲು ಮುಂದಾದ ಸಮಯದಲ್ಲಿ ಬೆಂಕಿ ವ್ಯಾಪಿಸಿದೆ.

ಸುತ್ತಮುತ್ತಲಿನ ಜನರು ಬೆಂಕಿ ನಂದಿಸಲು ಪ್ರಯತ್ನ ಪಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ADVERTISEMENT

ಮನೆಯಲ್ಲಿದ್ದ ಟಿ.ವಿ, ಆಹಾರ ಪದಾರ್ಥ, ಹೊದಿಕೆ, ಬಟ್ಟೆ, ದಿನಬಳಕೆ ವಸ್ತುಗಳು ಸುಟ್ಟು ಹೋಗಿವೆ.

ಶಿರಾ ತಾಲ್ಲೂಕಿನ ಎಂ.ದಾಸರಹಳ್ಳಿ ಗ್ರಾಮದಲ್ಲಿ ಗುರುವಾರ ಗೋವಿಂದಪ್ಪ ಅವರ ಮನೆಗೆ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಆಗ್ನಿಶಾಮಕ‌ ದಳದವರು ಬೆಂಕಿ ನಂದಿಸುತ್ತಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.