ADVERTISEMENT

ಹೆಣ್ಣು ಮಕ್ಕಳ ಗೌರವ ಹೆಚ್ಚಿಸಬೇಕು: ಎಸ್.ಸಿದ್ದರಾಮಣ್ಣ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 5:50 IST
Last Updated 30 ಜನವರಿ 2026, 5:50 IST
ತುಮಕೂರಿನಲ್ಲಿ ಬುಧವಾರ ಪ್ರಬಂಧ ಸ್ಪರ್ಧೆಗೆ ಚಾಲನೆ ನೀಡಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉನಿರ್ದೇಶಕ ಎಸ್.ಸಿದ್ದರಾಮಣ್ಣ, ಡಿಡಿಪಿಐ ಕೆ.ಜಿ.ರಘುಚಂದ್ರ, ಅಧಿಕಾರಿಗಳಾದ ಎಂ.ಆರ್.ದಿನೇಶ್, ಹನುಮಂತಪ್ಪ, ಅಂಬಿಕಾ, ಪಲ್ಲವಿ, ಸುರೇಶ್ ಉಪಸ್ಥಿತರಿದ್ದರು
ತುಮಕೂರಿನಲ್ಲಿ ಬುಧವಾರ ಪ್ರಬಂಧ ಸ್ಪರ್ಧೆಗೆ ಚಾಲನೆ ನೀಡಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉನಿರ್ದೇಶಕ ಎಸ್.ಸಿದ್ದರಾಮಣ್ಣ, ಡಿಡಿಪಿಐ ಕೆ.ಜಿ.ರಘುಚಂದ್ರ, ಅಧಿಕಾರಿಗಳಾದ ಎಂ.ಆರ್.ದಿನೇಶ್, ಹನುಮಂತಪ್ಪ, ಅಂಬಿಕಾ, ಪಲ್ಲವಿ, ಸುರೇಶ್ ಉಪಸ್ಥಿತರಿದ್ದರು   

ತುಮಕೂರು: ಹೆಣ್ಣು ಮಕ್ಕಳನ್ನು ಎಲ್ಲ ಕ್ಷೇತ್ರಗಳಲ್ಲಿ ಗುರುತಿಸಿ, ಅವರಿಗೆ ಸ್ಥಾನಮಾನ, ಗೌರವ ನೀಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ಸಿದ್ದರಾಮಣ್ಣ ತಿಳಿಸಿದರು.

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲಭವನ ಸಮಿತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಹೆಣ್ಣು ಮಕ್ಕಳಿಗೆ ಅವಕಾಶ, ಬೆಂಬಲ ಒದಗಿಸುವ ಸಲುವಾಗಿ ಪ್ರತಿ ವರ್ಷ ಜ. 24ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವಾಗಿ ಆಚರಿಸಲಾಗುತ್ತದೆ. ಹೆಣ್ಣು ಮಕ್ಕಳ ಬಗ್ಗೆ ಜಾಗೃತಿ ಮೂಡಿಸುವ ಜತೆಗೆ ಅವರ ಹಕ್ಕು, ಶಿಕ್ಷಣ, ಆರೋಗ್ಯಕ್ಕೆ ಒತ್ತು ನೀಡಲಾಗುತ್ತದೆ ಎಂದರು.

ADVERTISEMENT

ಹದಿಹರೆಯದ ವಯಸ್ಸಿನಲ್ಲಿ ಕೆಲವು ಗೊಂದಲಗಳು ಉಂಟಾಗುವುದು ಸಹಜ. ಸಮಸ್ಯೆಗಳು ಹೆಚ್ಚಾದಂತೆ ಸವಾಲುಗಳು ಹೆಚ್ಚುತ್ತವೆ. ಇಂತಹ ಸಮಸ್ಯೆ ನಿಭಾಯಿಸಲು ಆತ್ಮಸ್ಥೈರ್ಯ ಮುಖ್ಯ. ತಂದೆ-ತಾಯಿ ಮಾತುಗಳನ್ನು ಸಕರಾತ್ಮಕವಾಗಿ ಆಲಿಸಬೇಕು. ಶಿಕ್ಷಕರಿಗೆ ಗೌರವ ಕೊಡಬೇಕು ಎಂದು ಸಲಹೆ ಮಾಡಿದರು.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಕ ಕೆ.ಜಿ.ರಘುಚಂದ್ರ, ‘ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ, ಪ್ರಮಾಣ ಪತ್ರ ನೀಡಲಾಗುತ್ತದೆ’ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಎಂ.ಆರ್.ದಿನೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ, ಜಿಲ್ಲಾ ನಿರೂಪಣಾಧಿಕಾರಿ ಅಂಬಿಕಾ, ತೀರ್ಪುಗಾರರಾಗಿ ಆಗಮಿಸಿದ ಪಲ್ಲವಿ, ಸುರೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.