ADVERTISEMENT

ತುರುವೇಕೆರೆ: ಗಣೇಶ ವಿಸರ್ಜನೆ ವೇಳೆ ನೀರಲ್ಲಿ ಮುಳುಗಿ ತಂದೆ, ಮಗ ಸೇರಿ ಮೂವರು ಸಾವು

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2024, 11:47 IST
Last Updated 15 ಸೆಪ್ಟೆಂಬರ್ 2024, 11:47 IST
<div class="paragraphs"><p>ಮೃತದೇಹಗಳ ಪತ್ತೆಗೆ ನದಿಯಲ್ಲಿ ನಡೆಯುತ್ತಿರುವ ಶೋಧಕಾರ್ಯ</p></div>

ಮೃತದೇಹಗಳ ಪತ್ತೆಗೆ ನದಿಯಲ್ಲಿ ನಡೆಯುತ್ತಿರುವ ಶೋಧಕಾರ್ಯ

   

ತುರುವೇಕೆರೆ: ತಾಲ್ಲೂಕಿನ ರಂಗನಹಟ್ಟಿ ಕಟ್ಟೆಯಲ್ಲಿ ಭಾನುವಾರ ಗಣಪತಿ ವಿಸರ್ಜನೆ ವೇಳೆ ನೀರಲ್ಲಿ ಮುಳುಗಿ ತಂದೆ, ಮಗ ಸೇರಿ ಮೂವರು ಮೃತಪಟ್ಟಿದ್ದಾರೆ.

ರಂಗನಹಟ್ಟಿ ಗ್ರಾಮದ ರೇವಣ್ಣ (50), ಪುತ್ರ ಶರತ್ (26) ಮತ್ತು ದಯಾನಂದ್(22) ಮೃತರು. ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಊರಿನ ಯುವಕರು ಬೆಳಿಗ್ಗೆಯಿಂದ ಮೆರವಣಿಗೆ ನಡೆಸಿ, ಮಧ್ಯಾಹ್ನ ರಂಗನಕಟ್ಟೆಯಲ್ಲಿ ವಿಸರ್ಜನೆ ಮಾಡಲು ಹೋಗಿದ್ದರು.

ADVERTISEMENT

ಮೂರ್ತಿ ಹಿಡಿದು ಶರತ್ ಮತ್ತು ದಯಾನಂದ್ ನೀರಿಗೆ ಇಳಿದಿದ್ದರು. ಕಟ್ಟೆಯಲ್ಲಿನ ಕೆಸರಿನಲ್ಲಿ ಕಾಲು ಸಿಲುಕಿಕೊಂಡಿವೆ. ಈಜಲು ಸಾಧ್ಯವಾಗದೆ ಕಟ್ಟೆಯ ದಡದಲ್ಲಿದ್ದವರ ಸಹಾಯಕ್ಕೆ ಕೂಗಿ ಕೊಂಡಿದ್ದಾರೆ. ತಕ್ಷಣ ಶರತ್ ಅವರ ತಂದೆ ರೇವಣ್ಣ ನೀರಿಗೆ ಧುಮಿಕಿದ್ದಾರೆ. ಈಜಲು ಆಗದೆ ಅವರು ಸಹ ನೀರಿನಲ್ಲಿ ಮುಳುಗಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿ ಪೊಲೀಸರ ಸಹಾಯದೊಂದಿಗೆ ಮೃತದೇಹಗಳ ಪತ್ತೆಗೆ ಶೋಧಕಾರ್ಯ ಮುಂದುವರಿಸಿದ್ದಾರೆ. ವಿಷಯ ತಿಳಿದು ರಂಗನಹಟ್ಟಿ ಸುತ್ತಮುತ್ತಲಿನ ಜನ ಕಟ್ಟೆಯ ಬಳಿ ಜಮಾಯಿಸಿದ್ದರು. ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.