ADVERTISEMENT

ತಿಪಟೂರು | ಧ್ವಜ ವಿವಾದ: ಪ್ರಕರಣ ಹಿಂಪಡೆಯುವಂತೆ ನಗರಸಭೆ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 4:34 IST
Last Updated 25 ಜುಲೈ 2025, 4:34 IST
ತಿಪಟೂರು ನಗರಸಭೆ ಕಚೇರಿ ಮುಂಬಾಗ ಪ್ರತಿಭಟನೆ ನಡೆಯಿತು 
ತಿಪಟೂರು ನಗರಸಭೆ ಕಚೇರಿ ಮುಂಬಾಗ ಪ್ರತಿಭಟನೆ ನಡೆಯಿತು    

ತಿಪಟೂರು: ಇಂದಿರಾ ನಗರದಲ್ಲಿ ವಿಜಯನಗರ ಸಾಮ್ರಾಜ್ಯದ ಲಾಂಛನ ಹೋಲುವ ಧ್ವಜ ಹಾರಿಸಿದ್ದ ಆರೋಪದಲ್ಲಿ ಐವರನ್ನು ವಶಕ್ಕೆ ಪಡೆದು, ಬೆಳಿಗ್ಗೆಯಿಂದ ತಡರಾತ್ರಿವರೆಗೆ ಠಾಣೆಯಲ್ಲಿ ಇಟ್ಟುಕೊಳ್ಳಲಾಗಿದೆ ಎಂದು ಆರೋಪಿಸಿ ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರು ಗುರುವಾರ ನಗರಸಭೆ ಮುಂಭಾಗ ಪ್ರತಿಭಟನೆ ನಡೆಸಿದರು. 

ನಗರಸಭೆ ಆಯುಕ್ತ ಹಾಗೂ ನಗರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ದ್ವಂದ್ವ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಆಯುಕ್ತರು ಸ್ಪಷ್ಟನೆ ನೀಡಬೇಕು. ಆರೋಪಿಗಳ ವಿರುದ್ಧ ಪ್ರಕರಣ ಕೈಬಿಡಬೇಕು ಎಂದು ಒತ್ತಾಯಿಸಿ ಪ್ರತಿಭಟಿಸಿದರು. ಸಂಜೆವರೆಗೂ ಆಯುಕ್ತರು ಪ್ರತಿಕ್ರಿಯಿಸದ ಕಾರಣ ನಗರಸಬೆ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿದರು.

ಸ್ಥಳಕ್ಕೆ ಬಂದ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಸಿ.ಗೋಪಾಲ್, ಮಾಜಿ ಸಚಿವ ಬಿ.ಸಿ. ನಾಗೇಶ್, ನಗರಸಭಾ ಸದಸ್ಯ ರಾಮ್‌ಮೋಹನ್, ಶಶಿಕಿರಣ್, ಮಾಜಿ ಸದಸ್ಯ ಪ್ರಸನ್ನಕುಮಾರ್, ಡಿವೈಎಸ್‌ಪಿ ವಿನಾಯಕ ಶೆಟೆಗೇರಿ, ನಗರಸಭೆ ಆಯುಕ್ತ ವಿಶ್ವೇಶ್ವರ ಬದರಗಡೆ ಸಮ್ಮಖದಲ್ಲಿ ಆಯುಕ್ತರ ಕಚೇರಿಯಲ್ಲಿ ಸಭೆ ನಡೆಸಲಾಯಿತು.

ADVERTISEMENT

ಧ್ವಜಸ್ತಂಬ ಇರುವ ಸ್ಥಳವು ಅತಿ ಸೂಕ್ಷ್ಮ ಪ್ರದೇಶವಾಗಿದ್ದು, ಆ ಸ್ಥಳದಲ್ಲಿ ಇನ್ನು ಮುಂದೆ ಅನುಮತಿಯಿಲ್ಲದೆ ಯಾವುದೇ ಧ್ವಜಗಳನ್ನು ಕಟ್ಟಬಾರದು ಎಂದು ನಿರ್ಣಯ ತೆಗೆದುಕೊಳ್ಳಲಾಯಿತು. ಸಂಜೆ ಪ್ರತಿಭಟನೆ ಕೈಬಿಡಲಾಯಿತು.

ಘಟನಾ ಸ್ಥಳಕ್ಕೆ ತಿಪಟೂರು ಉಪವಿಭಾಗದ ಎಲ್ಲಾ ಠಾಣೆಗಳಿಂದ ಹೆಚ್ಚುವರಿ ಪೊಲೀಸ್‌ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.

ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗರಾಜು, ಪುರಸಭಾ ಮಾಜಿ ಅಧ್ಯಕ್ಷ ಲಿಂಗರಾಜು, ನಗರಸಬಾ ಸದಸ್ಯ ವಿಜಯಕ್ಷ್ಮಿ, ಸಂಧ್ಯಾಕಿರಣ್, ಪ್ರಸನ್ನ, ಮೋಹನ್, ಗುಲಾಬಿಸುರೇಶ್, ಬಳ್ಳೆಕಟ್ಟೆ ಸುರೇಶ್, ಬಾಳೆಕಾಯಿ ನಟರಾಜು, ಬಿಜೆಪಿ ನಗರ ಘಟಕದ ಅಧ್ಯಕ್ಷ ಸತೀಶ್, ಮಂಡಲ ಅಧ್ಯಕ್ಷ ಜಗದೀಶ್, ಬಿಸಲೇಹಳ್ಳಿ ಜಗದೀಶ್, ವಿಶ್ವದೀಪು, ತರಕಾರಿ ಗಂಗಾಧರ್, ನಾಗೇಶ್, ಪ್ರಜ್ವಲ್, ವಿಘ್ನೇಶ್, ಸಚಿನ್, ಬಸವರಾಜು, ದಿಲೀಪ್, ಕಾರ್ಯಕರ್ತರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.