
ತೋವಿನಕೆರೆ: ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘದ ಪಡಿತರ ವಿತರಣಾ ಕೇಂದ್ರದಲ್ಲಿ ಗುರುವಾರದಿಂದ ವಿತರಿಸುತ್ತಿರುವ ಅಕ್ಕಿ ಮುಗ್ಗಲು ಹಿಡಿದಿದೆ ಎಂದು ಜನರು ಆರೋಪಿಸಿದ್ದಾರೆ.
ಪಡಿತರ ವಿತರಣಾ ಕೇಂದ್ರಕ್ಕೆ 68 ಮೂಟೆ ಅಕ್ಕಿ ಬಂದಿದ್ದು, ಅದರಲ್ಲಿ 20ಕ್ಕೂ ಹೆಚ್ಚು ಮೂಟೆ ಕಳಪೆ ಅಕ್ಕಿ ಸರಬರಾಜು ಮಾಡಿದ್ದಾರೆ. ಪಡಿತರದಾರರ ಮನೆಗೆ ಕೊಂಡೊಯ್ದಿದ್ದ ಅಕ್ಕಿಯನ್ನು ಗುರುವಾರ, ಶುಕ್ರವಾರ ಹಿಂದಿರುಗಿಸಿದ್ದಾರೆ.
ಶುಕ್ರವಾರ ಕೊರಟಗೆರೆ ಆಹಾರ ಇಲಾಖೆ ಉಪ ತಹಶೀಲ್ದಾರ್ ಗಿರಿ ಸುತ್ತೆ ಮತ್ತು ಶ್ರೀನಿವಾಸು ಭೇಟಿ ನೀಡಿ 17 ಮೂಟೆ ಕಳಪೆ ಅಕ್ಕಿಯನ್ನು ವಾಪಸ್ ಪಡೆದಿದ್ದಾರೆ.
ಪ್ರತಿ ಸಲ ಬರುವ ಅಕ್ಕಿಯ ಚೀಲಗಳನ್ನು ತುಂಬಿ ಯಂತ್ರದ ಮೂಲಕ ಹೊಲಿಗೆ ಹಾಕಿರುತ್ತಾರೆ. ಈ ಸಲ ಬಂದಿದ್ದ ಚೀಲಗಳನ್ನು ಕೈಯಿಂದ ಮೂಟೆ ಹೊಲೆದಿದ್ದಾರೆ ಎಂದು ಜನರು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.