
ತೋವಿನಕೆರೆ: ಗ್ರಾಮದ ಮಹಿಳೆಯೊಬ್ಬರ ಅರಿವಿಗೆ ಬಾರದಂತೆ ಎರಡು ಬ್ಯಾಂಕ್ ಖಾತೆಯಿಂದ ₹78 ಸಾವಿರ ಡ್ರಾ ಅಗಿದೆ.
ಮಹಿಳೆ ತೋವಿನಕೆರೆ ಮತ್ತು ಕೊರಟಗೆರೆ ಬ್ಯಾಂಕ್‌ಗಳಲ್ಲಿ ಹಲವು ವರ್ಷಗಳಿಂದ ಖಾತೆ ಹೊಂದಿದ್ದರು. ತೋವಿನಕೆರೆ ಕೆಜಿಬಿ ಬ್ಯಾಂಕ್‌ನಲ್ಲಿ ಹೊಂದಿರುವ ಖಾತೆ ಸಂಬಂಧ ಯಾವುದೇ ಎಟಿಎಂ ಅಥವಾ ಪೋನ್ ಪೇ ಉಪಯೋಗಿಸುತ್ತಿರಲಿಲ್ಲ. ಆದಾಗ್ಯೂ ಈ ಬ್ಯಾಂಕ್ ಖಾತೆಯಿಂದ ₹38 ಸಾವಿರ ಡ್ರಾ ಆಗಿದೆ.
ಕೊರಟಗೆರೆ ಯೂನಿಯನ್ ಬ್ಯಾಂಕ್‌ನಲ್ಲಿನ ಖಾತೆಯಲ್ಲಿ ಪೋನ್ ಪೇ ಬಳಸುತ್ತಿದ್ದರು. ಅದರ ಮೂಲಕವೇ ₹34 ಸಾವಿರ ಡ್ರಾ ಆಗಿದೆ.
ಹಣ ಡ್ರಾ ಆದ ಬಗ್ಗೆ ಮೊಬೈಲ್‌ಗೆ ಬಂದ ಮೆಸೇಜ್ ನೋಡಿ ಎಚ್ಚೆತ್ತ ಮಹಿಳೆ ಎರಡು ಬ್ಯಾಂಕ್‌ನವರಿಗೆ ಮಾಹಿತಿ ನೀಡಿದ್ದಾರೆ.
‘ಕೆ.ಜಿ.ಬಿ. ಬ್ಯಾಂಕ್‌ನವರು ಡ್ರಾ ಮಾಡಿದವರ ಹೆಸರಿಗೆ ಜಮಾ ಅಗದಂತೆ ತಡೆಯಲಾಗಿದೆ. ಹಣ ಬಂದ ಕೂಡಲೇ ಖಾತೆಗೆ ಜಮಾ ಮಾಡಲಾಗುವುದು’ ಎಂದ ಭರವಸೆ ನೀಡಿದ್ದಾರೆ. ಮತ್ತೊಂದು ಬ್ಯಾಂಕ್‌ನವರು ಸೈಬರ್ ಪೋಲಿಸರಿಗೆ ದೂರು ನೀಡಲು ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.