
ಪ್ರಜಾವಾಣಿ ವಾರ್ತೆಅಪಘಾತ –ಪ್ರಾತಿನಿಧಿಕ ಚಿತ್ರ
ಕುಣಿಗಲ್: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ಘಟನೆ ಭಾನುವಾರ ಮಧ್ಯಾಹ್ನ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 75 ಆಲಪ್ಪನಗುಡ್ಡೆ ಬಳಿ ನಡೆದಿದೆ.
ಮೃತ ಯುವಕ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಆಲನೇಹಳ್ಳಿ ನಿವಾಸಿ ಯತೀಶ್ ಗೌಡ (25) ಎಂದು ಗುರುತಿಸಲಾಗಿದೆ. ಬೆಂಗಳೂರು ಭುವನೇಶ್ವರಿ ನಗರ ನಿವಾಸಿ ಸೋದರಿ ಪೂಜಾ ಮತ್ತು ಮಗ ದೇವಪ್ರಯಾಗ್ ಗೌಡನನ್ನು ಬೈಕ್‌ನಲ್ಲಿ ಕರೆದುಕೊಂಡು ಸ್ವಗ್ರಾಮಕ್ಕೆ ಬರುವಾಗ ಈ ಘಟನೆ ಸಂಭವಿಸಿದೆ.
ಅಪಘಾತದಲ್ಲಿ ಗಾಯಗೊಂಡಿರುವ ಪೂಜಾ ಮತ್ತು ಮಗುವನ್ನು ಚಿಕಿತ್ಸೆಗಾಗಿ ಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.