ADVERTISEMENT

ಹ್ಯಾಂಡ್‌ಬಾಲ್‌ ಪಂದ್ಯಾವಳಿ: ತುಮಕೂರು ಮಹಿಳೆಯರಿಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 6:47 IST
Last Updated 23 ಜನವರಿ 2026, 6:47 IST
<div class="paragraphs"><p>ತುಮಕೂರಿನಲ್ಲಿ ಗುರುವಾರ ನಡೆದ ಹ್ಯಾಂಡ್‌ಬಾಲ್‌ ಪಂದ್ಯಾವಳಿಯ ವಿಜೇತ ತುಮಕೂರು ತಂಡಕ್ಕೆ ಪ್ರಶಸ್ತಿ ವಿತರಿಸಲಾಯಿತು</p></div>

ತುಮಕೂರಿನಲ್ಲಿ ಗುರುವಾರ ನಡೆದ ಹ್ಯಾಂಡ್‌ಬಾಲ್‌ ಪಂದ್ಯಾವಳಿಯ ವಿಜೇತ ತುಮಕೂರು ತಂಡಕ್ಕೆ ಪ್ರಶಸ್ತಿ ವಿತರಿಸಲಾಯಿತು

   

ತುಮಕೂರು: ರಾಜ್ಯ ಒಲಿಂಪಿಕ್ಸ್‌ ಕ್ರೀಡಾಕೂಟದ ಕೊನೆಯ ದಿನವಾದ ಗುರುವಾರ ಹ್ಯಾಂಡ್‌ಬಾಲ್‌ ಫೈನಲ್‌ ಪಂದ್ಯಗಳು ನಡೆದವು. ಮಹಿಳೆಯರ ವಿಭಾಗದಲ್ಲಿ ತುಮಕೂರು ತಂಡ ಚಿನ್ನದ ಪದಕ ಪಡೆಯಿತು.

ಅಂತಿಮ ಪಂದ್ಯದಲ್ಲಿ ತುಮಕೂರು– ಹಾಸನ ತಂಡಗಳು ಮುಖಾಮುಖಿಯಾದವು. 25–20 ಅಂಕಗಳಿಂದ ತುಮಕೂರು ತಂಡ ಗೆಲುವಿನ ದಡ ಸೇರಿತು. ಜ್ಯೋತಿ ಮತ್ತು ಮಾಧವಿ ತಲಾ 7 ಅಂಕ ಗಳಿಸಿ ಗೆಲುವಿಗೆ ಕಾರಣರಾದರು. ಶಿವಮೊಗ್ಗ ಹಾಗೂ ಬೆಂಗಳೂರು ನಗರ ಜಂಟಿ 3ನೇ ಸ್ಥಾನ ಪಡೆದವು. ಪುರುಷರ ವಿಭಾಗದಲ್ಲಿ ಬೆಂಗಳೂರು ಗ್ರಾಮಾಂತರ ತಂಡ 39-27 ರಿಂದ ‌ಬೆಂಗಳೂರು ನಗರ ತಂಡವನ್ನು ಸೋಲಿಸಿತು.

ADVERTISEMENT

ಅಥ್ಲೆಟಿಕ್ಸ್‌: ಮಹಿಳೆಯರ ವಿಭಾಗ– 100 ಮೀಟರ್‌ ಓಟ– ವೈಭವಿ ಬುದೃಕ್‌ (ಬೆಳಗಾವಿ)–1, ಎಚ್‌.ಎಸ್‌.ಹರ್ಷಿತಾ (ಮೈಸೂರು)–2, ಎಂ.ಮಮತಾ (ಮೈಸೂರು)–3. 5 ಸಾವಿರ ಮೀಟರ್‌ ಓಟ– ಎನ್.ಎಲ್.ತೇಜಸ್ವಿನಿ (ಬೆಂಗಳೂರು)–1, ಜಿ.ನಂದಿನಿ‌ (ಉಡುಪಿ)–2, ಪ್ರಣತಿ (ಬೆಂಗಳೂರು ಗ್ರಾಮಾಂತರ)–3. ಎತ್ತರ ಜಿಗಿತ– ಕೆ.ತ್ರಿಷ್ಣವಿ (ಉಡುಪಿ)–1. 400 ಮೀಟರ್‌ ಹರ್ಡಲ್ಸ್‌– ಮೇಘಾ ಮುನವಳ್ಳಿಮಠ್‌ (ಗದಗ)–1, ಅಪೂರ್ವ ನಾಯ್ಕ್‌ (ಬೆಳಗಾವಿ)–2, ರಮ್ಯಾ ಕದಮ್‌ (ವಿಜಯಪುರ)–3.

ಪುರುಷರ ವಿಭಾಗ: 100 ಮೀಟರ್‌ ಓಟ– ಎಂ.ಗೌತಮ್‌ (ಶಿವಮೊಗ್ಗ)–1, ಡಿ.ಧನುಷ್‌ (ಉಡುಪಿ)–2, ಪಿ.ಭವಿಷ್‌ (ಉಡುಪಿ)–3. 5 ಸಾವಿರ ಮೀಟರ್‌ ಓಟ– ವೈಭವ್‌ ಎಂ.ಪಾಟೀಲ್‌ (ಬೆಳಗಾವಿ)–1, ಎಸ್‌.ಭೀಮಾ ಶಂಕರ್‌ (ಯಾದಗಿರಿ)–2, ಆರ್‌.ಕೀರ್ತಿ (ದಾವಣಗೆರೆ)–3. ಹ್ಯಾಮರ್‌ ಥ್ರೋ– ಧೀರಜ್‌ ಪೂಜಾರಿ (ಉಡುಪಿ)–1, ಸುದೀಪ್‌ (ಶಿವಮೊಗ್ಗ)–2, ಅಬ್ದುಲ್‌ ರಜಾಕ್‌ (ದಕ್ಷಿಣ ಕನ್ನಡ)–3. 400 ಮೀಟರ್‌ ಹರ್ಡಲ್ಸ್‌– ವೀರೇಶ್‌ ಬಿ.ಕಾಂಬ್ಳೆ (ಬೆಳಗಾವಿ)–1, ಸೂರಜ್‌ ಬಾಳೆಕುಂದ್ರಿ (ಬೆಳಗಾವಿ)–2, ಜಾಗೃತ್‌ (ಬೆಂಗಳೂರು ನಗರ)–3.

ಶಾಟ್‌ಪುಟ್‌: ಪ್ರಜ್ವಲ್‌ ಎಂ.ಶೆಟ್ಟಿ (ಉಡುಪಿ)–1, ಪಿ.ಎಂ.ಮಣಿಕಂಠ (ಕೊಡಗು)–2, ಇ.ಮೋಹನ್‌ (ಮೈಸೂರು)–3. ಎತ್ತರ ಜಿಗಿತ– ಅಭಯ್‌ಕುಮಾರ್‌ ಗೌಡ (ಬೆಂಗಳೂರು ನಗರ)–1, ಎಸ್‌.ಹರ್ಷಿತ್‌ (ಬೆಂಗಳೂರು ನಗರ)–2, ತ್ರಿಲೋಕ್‌ ಒಡೆಯರ್‌ (ಬೆಂಗಳೂರು ನಗರ)–3. ಜಾವೆಲಿನ್‌ ಎಸೆತ– ಕಲ್ಲೋಲೆಪ್ಪ (ಬೆಳಗಾವಿ)–1, ಶಾರುಖ್‌ (ಬೆಂಗಳೂರು ನಗರ)–2, ಯುವರಾಜ್‌ ಲಮಾಣಿ (ಬಾಗಲಕೋಟೆ)–3.

ಕೊಕ್ಕೊ ಪಂದ್ಯದಲ್ಲಿ ಆಟಗಾರ ಅಂಕ ಗಳಿಸಲು ಪ್ರಯತ್ನಿಸಿದ ಪರಿ

ಡೈವ್‌ ಹೊಡೆದು ಅಂಕ ಪಡೆದ ಆಟಗಾರ
ಜಿಮ್ನಾಸ್ಟಿಕ್‌ ಸ್ಪರ್ಧೆಯಲ್ಲಿ ಸ್ಪರ್ಧಿಗಳ ಸಾಹಸ ಪ್ರದರ್ಶನ
ತುಮಕೂರಿನಲ್ಲಿ ಗುರುವಾರ ಮುಕ್ತಾಯವಾದ ರಾಜ್ಯ ಒಲಿಂಪಿಕ್ಸ್‌ನಲ್ಲಿ 100 ಮೀಟರ್‌ ಓಟದ ಸ್ಪರ್ಧೆ ಗಮನ ಸೆಳೆಯಿತು
ಕುಸ್ತಿಪಟುಗಳ ಸೆಣಸಾಟ

ಕುಸ್ತಿ: ದಾವಣಗೆರೆ ಪದಕ ಬೇಟೆ

ಕುಸ್ತಿ ಸ್ಪರ್ಧೆಯಲ್ಲಿ ದಾವಣಗೆರೆ ಕುಸ್ತಿಪಟುಗಳ ಪದಕ ಬೇಟೆಯಾಡಿದರು. ಪುರುಷರ ವಿಭಾಗ: 55 ಕೆ.ಜಿ– ಶಿವಪ್ಪ ಎಸ್‌.ಜಂಬಗಿ (ಬಾಗಲಕೋಟೆ)–1 ಅಬುಬಾಕರ್‌ ಸಲೀಂ ನಡ್‌ (ಹಳಿಯಾಳ)–2 ಆರ್‌.ನಿರಂಜನ್‌ (ಶಿವಮೊಗ್ಗ )–3. 60 ಕೆ.ಜಿ– ಪ್ರೀತಿ ಕೆರೂರ್‌ (ಬಾಗಲಕೋಟೆ)–1 ಹನುಮಂತ್‌ ತುಂಗಲ್‌ (ಬಾಗಲಕೋಟೆ)–2 ಮನೋಜ್‌ ಹನುಮಂತ್‌ ಹೊನಮನಿ (ಉತ್ತರ ಕರ್ನಾಟಕ)–3. 67 ಕೆ.ಜಿ– ಡಿ.ಸಿ.ಕೀರ್ತನ್‌ (ದಾವಣಗೆರೆ)–1 ಬಿ.ಉಮೇಶ್‌ (ದಾವಣಗೆರೆ)–2 ಆರ್‌.ಟಿ.ಕೈಲಾಶ್‌ (ಬೆಳಗಾವಿ)–3. 82 ಕೆ.ಜಿ– ಹನುಮಂತ್‌ ಎನ್‌.ಚನ್ನಾಳ್‌ (ದಾವಣಗೆರೆ)–1 ಮಹದೇವರ ಕುರಾನಿ (ದಾವಣಗೆರೆ)–2 ಮಹೇಶ್‌ ಕೃಷ್ಣ ಬಿಜೆರ್‌ (ಬೆಳಗಾವಿ)–3. 87 ಕೆ.ಜಿ– ಮುತ್ತ ರಮೇಶ್‌ ಬಾವಿ (ಗದಗ)–1 ಕೆ.ಪಿ.ಪರಮೇಶ್‌ (ದಾವಣಗೆರೆ)–2 ಆರ್‌.ನಂದೀಶ್‌ (ದಾವಣಗೆರೆ)–3. 97 ಕೆ.ಜಿ–ಹನುಮಂತ ವಿಠಲ ಕೆಂಪಣ್ಣನವರ್‌ (ದಾವಣಗೆರೆ)–1 ವರುಣ್‌ ಅಥಣಿಮಠ್‌ (ಬಾಗಲಕೋಟೆ)–2 ಎಚ್‌.ಬಿ.ರಂಜಿತ್‌ (ದಾವಣಗೆರೆ)–3.130 ಕೆ.ಜಿ– ಎಸ್‌.ಸೃಜನ್‌ (ದಾವಣಗೆರೆ)–1 ಮೋಹನ್‌ ಕಾರ್ತಿಕ್‌ (ಬಾಗಲಕೋಟೆ)–2 ರಾಹುಲ್‌ ವಾಸ್ನಿ ಸಿದ್ದಮನಹಳ್ಳಿ (ಗದಗ)–3. ಮಹಿಳೆಯರ ವಿಭಾಗ: 50 ಕೆ.ಜಿ– ಎನ್‌.ಯಶಸ್ವಿನಿ (ಬೆಳಗಾವಿ)–1 ವೈಷ್ಣವಿ ಇಮ್ಮಡಿಯವರ್‌ (ಗದಗ)–2 ಚೈತನ್ಯಾ (ಬೆಳಗಾವಿ)–3. 53 ಕೆ.ಜಿ– ನಂದಿನಿ (ಬೆಳಗಾವಿ)–1 ದೀಕ್ಷಾ (ದಕ್ಷಿಣ ಕನ್ನಡ)–2 ಸ್ನೇಹಾ (ಗದಗ)–3. 65 ಕೆ.ಜಿ– ಭಾಗ್ಯವತಿ (ಹಳಿಯಾಳ)–1 ಅನುಶ್ರೀ (ಬೆಳಗಾವಿ)–2 ಅದಿತಿ ಶೆಟ್ಟಿ (ದಕ್ಷಿಣ ಕನ್ನಡ)–3. 62 ಕೆ.ಜಿ– ಸವಿತಾ ಎ.ಸಿದ್ದಿ (ಉತ್ತರ ಕನ್ನಡ)–1 ರಾಧಿಕಾ ವಿ.ತೊಂಡಿಹಾಳ್‌ (ಬೆಳಗಾವಿ)–2 ವರ್ಷ ಎನ್‌.ಯಮನಕ್ಕನವರ್‌ (ಉತ್ತರ ಕನ್ನಡ)–3. 72 ಕೆ.ಜಿ– ತೇಜಸ್ವಿನಿ (ಗದಗ)–1 ಕವಿನಾ (ಶಿವಮೊಗ್ಗ)–2 ಟಿ.ಜಿ.ಮಾನ್ಯಾ (ದಕ್ಷಿಣ ಕನ್ನಡ)–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.