ADVERTISEMENT

ಪಾವಗಡ | ಲೋಕ ಅದಾಲತ್: ಒಂದೇ ದಿನ 337 ಪ್ರಕರಣ ಇತ್ಯರ್ಥ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2024, 15:30 IST
Last Updated 17 ಮಾರ್ಚ್ 2024, 15:30 IST
ಪಾವಗಡ ನ್ಯಾಯಾಲಯದಲ್ಲಿ ಶನಿವಾರ ಲೋಕ ಅದಾಲತ್ ನಡೆಯಿತು. ನ್ಯಾಯಾಧೀಶೆ ಎಂ.ಎಸ್. ಹರಿಣಿ, ವಕೀಲರು ಮತ್ತು ಸಿಬ್ಬಂದಿ ಇದ್ದರು.
ಪಾವಗಡ ನ್ಯಾಯಾಲಯದಲ್ಲಿ ಶನಿವಾರ ಲೋಕ ಅದಾಲತ್ ನಡೆಯಿತು. ನ್ಯಾಯಾಧೀಶೆ ಎಂ.ಎಸ್. ಹರಿಣಿ, ವಕೀಲರು ಮತ್ತು ಸಿಬ್ಬಂದಿ ಇದ್ದರು.   

ಪಾವಗಡ: ಪಟ್ಟಣದಲ್ಲಿ ಶನಿವಾರ ಮೂರು ನ್ಯಾಯಾಲಯಗಳ ಪ್ರಕರಣಗಳನ್ನು ಒಬ್ಬ ನ್ಯಾಯಾಧೀಶರು ರಾತ್ರಿ 7.30ರವರೆಗೆ ಬಗೆಹರಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.

ಪ್ರಧಾನ ಸಿವಿಲ್ ನ್ಯಾಯಾಲಯ, ಹೆಚ್ಚುವರಿ ಸಿವಿಲ್ ನ್ಯಾಯಾಲಯಗಳ ನ್ಯಾಯಾಧೀಶರು ವರ್ಗಾವಣೆ ಆಗಿರುವ ಹಿನ್ನೆಲೆ ಸಾಕಷ್ಟು ಪ್ರಕರಣಗಳು ಬಾಕಿ ಉಳಿದಿದ್ದವು.

ಮೂರು ನ್ಯಾಯಾಲಯಗಳ ಪೈಕಿ ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಎಸ್. ಹರಿಣಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಲೋಕ ಅದಾಲತ್ ಹಿನ್ನೆಲೆ ಸಾವಿರಾರು ಮಂದಿ ಕಕ್ಷಿದಾರರು, ವಕೀಲರಿಂದ ನ್ಯಾಯಾಲಯದ ಆವರಣ ತುಂಬಿತ್ತು.

ADVERTISEMENT

ನ್ಯಾಯಾಧೀಶೆ ಎಂ.ಎಸ್. ಹರಿಣಿ  ಅವರು ಬೆಳಿಗ್ಗೆಯಿಂದಲೇ ಲೋಕ ಅದಾಲತ್ ಆರಂಭಿಸಿ ಹಂತಹಂತವಾಗಿ ಮೂರು ನ್ಯಾಯಾಲಯಗಳ 337 ಪ್ರಕರಣಗಳನ್ನು ಇತ್ಯರ್ಥ ಪಡಿಸಿದರು.

ಹಿರಿಯ ಸಿವಿಲ್ ನ್ಯಾಯಾಲಯದ 190, ಪ್ರಧಾನ ಸಿವಿಲ್ ನ್ಯಾಯಾಲಯದ 92, ಹೆಚ್ಚುವರಿ ಸಿವಿಲ್ ನ್ಯಾಯಾಲಯದ 55 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.