
ಪ್ರಜಾವಾಣಿ ವಾರ್ತೆ
ತುಮಕೂರು: ನಗರದ ಹೊರಪೇಟೆ ಲೂರ್ದುಮಾತೆ ಚರ್ಚ್‌ನ ವಾರ್ಷಿಕೋತ್ಸವ ಅಂಗವಾಗಿ ನಗರದಲ್ಲಿ ಭಾನುವಾರ ಲೂರ್ದುಮಾತೆ ಪ್ರತಿಮೆಯ ತೇರು ಮೆರವಣಿಗೆ ನಡೆಯಿತು.
147ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಫೆ. 2ರಿಂದ ಚರ್ಚ್‌ನಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರಿನ ಮಹಾಧರ್ಮಕ್ಷೇತ್ರದ ಸಹಾಯಕ ಧರ್ಮಾಧ್ಯಕ್ಷ ಜೋಸೆಫ್ ಸೂಸೈನಾಥನ್ ಅವರು ಗಾಯನ ನಡೆಸಿಕೊಟ್ಟರು. ಸಂಜೆಯ ನಂತರ ಲೂರ್ದುಮಾತೆ ಪ್ರತಿಮೆಯ ಮೆರವಣಿಗೆ ನೆರವೇರಿತು.
ಹೊರಪೇಟೆ ಚರ್ಚ್ ಬಳಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಚಿಕ್ಕಪೇಟೆ, ಅರಳೇಪೇಟೆ ವೃತ್ತ, ಬಾರ್‌ಲೈನ್ ರಸ್ತೆ, ಎಂ.ಜಿ.ರಸ್ತೆ, ಗುಂಚಿ ವೃತ್ತದ ಮೂಲಕ ಚರ್ಚ್ ತಲುಪಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.