ADVERTISEMENT

ತುಮಕೂರು | ಪುನೀತ್ ರಾಜ್ ಕಪ್: ಕ್ರಿಕೆಟ್ ಪಂದ್ಯ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 5:33 IST
Last Updated 28 ನವೆಂಬರ್ 2025, 5:33 IST
ತುಮಕೂರಿನಲ್ಲಿ ಗುರುವಾರ ‘ಪುನೀತ್ ರಾಜ್ ಕಪ್’ ಕ್ರಿಕೆಟ್ ಪಂದ್ಯಾವಳಿ ಪೋಸ್ಟರ್‌ಅನ್ನು ಶಾಸಕ ಜಿ.ಬಿ.ಜ್ಯೋತಿಗಣೇಶ್ ಬಿಡುಗಡೆ ಮಾಡಿದರು. ಪ್ರಮುಖರಾದ ಎಚ್.ಎನ್.ದೀಪಕ್, ಕೃಷ್ಣಮೂರ್ತಿ, ಪ್ರಕಾಶ್ ಚಕ್ರವರ್ತಿ ಇತರರು ಉಪಸ್ಥಿತರಿದ್ದರು
ತುಮಕೂರಿನಲ್ಲಿ ಗುರುವಾರ ‘ಪುನೀತ್ ರಾಜ್ ಕಪ್’ ಕ್ರಿಕೆಟ್ ಪಂದ್ಯಾವಳಿ ಪೋಸ್ಟರ್‌ಅನ್ನು ಶಾಸಕ ಜಿ.ಬಿ.ಜ್ಯೋತಿಗಣೇಶ್ ಬಿಡುಗಡೆ ಮಾಡಿದರು. ಪ್ರಮುಖರಾದ ಎಚ್.ಎನ್.ದೀಪಕ್, ಕೃಷ್ಣಮೂರ್ತಿ, ಪ್ರಕಾಶ್ ಚಕ್ರವರ್ತಿ ಇತರರು ಉಪಸ್ಥಿತರಿದ್ದರು   

ತುಮಕೂರು: ಡಾ.ರಾಜ್ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಘ ಮತ್ತು ಚಕ್ರವರ್ತಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಡಾ.ಜಯರಾಮ್ ಸ್ಮರಣಾರ್ಥ ರಾಜ್ಯ ಮಟ್ಟದ ಹೊನಲು ಬೆಳಕಿನ ‘ಪುನೀತ್ ರಾಜ್ ಕಪ್’ ಕ್ರಿಕೆಟ್ ಪಂದ್ಯಾವಳಿ ನಗರದಲ್ಲಿ ಡಿಸೆಂಬರ್ 25ರಿಂದ 28ರ ವರೆಗೆ ನಡೆಯಲಿದೆ.

ನಗರದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಕ್ರಿಕೆಟ್ ಪಂದ್ಯಾವಳಿಯ ಪೋಸ್ಟರ್‌ಅನ್ನು ಶಾಸಕ ಜಿ.ಬಿ.ಜ್ಯೋತಿಗಣೇಶ್ ಬಿಡುಗಡೆ ಮಾಡಿದರು. ವರನಟ ಡಾ.ರಾಜ್ ಕುಮಾರ್ ಕುಟುಂಬದ ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ಪಂದ್ಯಾವಳಿ ನಡೆಯುತ್ತಿರುವುದು ಸಂತಸದ ವಿಚಾರ ಎಂದರು.

ವಿಜಯ ಸೇನೆ ಅಧ್ಯಕ್ಷ ಎಚ್.ಎನ್.ದೀಪಕ್, ‘ಪ್ರತಿ ವರ್ಷವೂ ಯಾವುದಾದರೂ ಒಂದು ಕಾರ್ಯಕ್ರಮ ಆಯೋಜನೆ ಮಾಡಿಕೊಂಡು ಬರುತ್ತಿದ್ದೇವೆ. ಅದರಲ್ಲಿ ಕ್ರಿಕೆಟ್‌ಗೆ ಒತ್ತು ಕೊಡುತ್ತಿದ್ದೇವೆ’ ಎಂದು ಹೇಳಿದರು.

ADVERTISEMENT

ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ, ‘ಈ ಬಾರಿಯ ಪಂದ್ಯಾವಳಿಗೆ 14 ತಂಡಗಳು ಬರುತ್ತಿವೆ. ಮೊದಲ ಬಹುಮಾನ ₹5 ಲಕ್ಷ, ಎರಡನೇ ಬಹುಮಾನ ₹2.50 ಲಕ್ಷ, ಮೂರು, ನಾಲ್ಕನೇ ಬಹುಮಾನವಾಗಿ ತಲಾ ₹50 ಸಾವಿರ ನೀಡಲಾಗುತ್ತದೆ’ ಎಂದು ಮಾಹಿತಿ ಹಂಚಿಕೊಂಡರು.

ಚಕ್ರವರ್ತಿ ಸ್ಪೋರ್ಟ್ಸ್ ಕ್ಲಬ್‌ನ ಪ್ರಕಾಶ್ ಚಕ್ರವರ್ತಿ, ‘ನಾಲ್ಕು ದಿನ ನಡೆಯುವ ಪಂದ್ಯಾವಳಿಯನ್ನು ಸುಸಜ್ಜಿತವಾಗಿ ಆಯೋಜಿಸಲಾಗುತ್ತಿದೆ. ಟೀ ಶರ್ಟ್, ಊಟದ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದರು.

ಪ್ರಮುಖರಾದ ಧನಿಯಾಕುಮಾರ್, ಶಂಕರ್, ರಂಜನ್, ಅರವಿಂದ್, ಚೇತನ್, ಹರೀಶ್, ಚಂದನ್, ಅಖಿಲೇಶ್, ಅರುಣ್ ಕೃಷ್ಣಯ್ಯ, ಅರವಿಂದ್ ಬಾಳಾರಾಧ್ಯ ಇತರರು ಉಪಸ್ಥಿತರಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.