ಚಿಕ್ಕನಾಯಕನಹಳ್ಳಿ: ತಾಲ್ಲೂಕಿನಲ್ಲಿ ಶನಿವಾರ ರಾತ್ರಿ ಸುರಿದ ಮಳೆಗೆ ಹಲವೆಡೆ ವಿದ್ಯುತ್ ಕಂಬಗಳು ಉರುಳಿವೆ.
ಮರಗಳು ವಿದ್ಯುತ್ ತಂತಿ ಮೇಲೆ ಬಿದ್ದಿರುವ ಕಾರಣ ಕಂಬಗಳು ಮುರಿದಿವೆ. ಹಲವೆಡೆ ವಿದ್ಯುತ್ ಪರಿವರ್ತಕಗಳಿಗೂ ಹಾನಿಯಾಗಿದೆ ಎಂದು ಬೆಸ್ಕಾಂ ವಿಭಾಗೀಯ ಕಾರ್ಯನಿರ್ವಾಹಕ ಎಂಜಿನಿಯರ್ ಎನ್.ಬಿ. ಗವಿರಂಗಯ್ಯ ತಿಳಿಸಿದ್ದಾರೆ.
ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ತಾಲ್ಲೂಕಿನ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗ ತೊಡಗಿತು. ರಾತ್ರಿಯಿಂದಲೇ ವ್ಯತ್ಯಯ ಸರಿಪಡಿಸುವ ಕೆಲಸ ಪ್ರಾರಂಭಿಸಿದರೂ ಬಿಟ್ಟು ಬಿಟ್ಟು ಬರುತ್ತಿದ್ದ ಮಳೆಯಿಂದ ಕೆಲಸಕ್ಕೆ ತೊಡಕಾಯಿತು. ಭಾನುವಾರ ಸಂಜೆ ಹೊತ್ತಿಗೆ ಪಟ್ಟಣ ಸೇರಿದಂತೆ ತಾಲ್ಲೂಕಿನ ಎಲ್ಲೆಡೆ ವಿದ್ಯುತ್ ಸೌಕರ್ಯ ಎಂದಿನಂತೆ ಸುಸ್ಥಿತಿಗೆ ಮರಳಲಿದೆ ಎಂದರು.
ತಾಲ್ಲೂಕಿನ ತಿಮ್ಮನಹಳ್ಳಿ, ಶೆಟ್ಟಿಕೆರೆ, ಹುಳಿಯಾರು, ಚಿ.ನಾ. ಹಳ್ಳಿ ಹಾಗೂ ಇತರೆಡೆ 70ರಿಂದ 80 ಕಂಬಗಳು ಉರುಳಿರುವ ಅಂದಾಜಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.