
ತುಮಕೂರು: ಕಂದಾಯ ಗ್ರಾಮಗಳ ಹಕ್ಕುಪತ್ರ, ದರಖಾಸ್ತು ಪೋಡಿ, ಇ-ಪೌತಿ ಖಾತೆ ಯಶಸ್ವಿ ಅನುಷ್ಠಾನಕ್ಕಾಗಿ ಜಿಲ್ಲೆಯ 9 ತಹಶೀಲ್ದಾರ್, 3 ಗ್ರಾಮ ಆಡಳಿತ ಅಧಿಕಾರಿಗಳು ಸರ್ಕಾರದ ಅಭಿನಂದನಾ ಪತ್ರಕ್ಕೆ ಅರ್ಹರಾಗಿದ್ದಾರೆ.
ಕಂದಾಯ ಇಲಾಖೆ ನೀಡುವ ಅಭಿನಂದನಾ ಪತ್ರದ ಗೌರವಕ್ಕೆ ರಾಜ್ಯದ 50 ತಹಶೀಲ್ದಾರ್ ಪಾತ್ರರಾಗಿದ್ದು, ಜಿಲ್ಲೆಯ 10 ತಾಲ್ಲೂಕು ಪೈಕಿ 9 ತಹಶೀಲ್ದಾರರಿಗೆ ಈ ಗೌರವ ಸಿಕ್ಕಿದೆ.
ಗುಬ್ಬಿ ತಾಲ್ಲೂಕಿನ ಬಿ.ಆರತಿ, ಶಿರಾ ತಾಲ್ಲೂಕಿನ ಆನಂದ್ ಕುಮಾರ್, ತುಮಕೂರು ತಾಲ್ಲೂಕಿನ ಪಿ.ಎಸ್.ರಾಜೇಶ್ವರಿ, ತುರುವೇಕೆರೆ ತಾಲ್ಲೂಕಿನ ಎನ್.ಕೆ.ಕುಂಞ ಅಹಮದ್, ತಿಪಟೂರು ತಾಲ್ಲೂಕಿನ ಜಿ.ವಿ.ಮೋಹನ್ ಕುಮಾರ್, ಮಧುಗಿರಿ ತಾಲ್ಲೂಕಿನ ಎಚ್.ಶ್ರೀನಿವಾಸ್, ಪಾವಗಡ ತಾಲ್ಲೂಕಿನ ವೈ.ರವಿ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಎಂ.ಮಮತ, ಕೊರಟಗೆರೆ ತಾಲ್ಲೂಕಿನ ಕೆ.ಮಂಜುನಾಥ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಕುಣಿಗಲ್ ತಾಲ್ಲೂಕು ಹೊರತುಪಡಿಸಿ ಉಳಿದವರಿಗೆ ಪ್ರಶಸ್ತಿ ಸಿಕ್ಕಂತಾಗಿದೆ.
ಗ್ರಾಮ ಆಡಳಿತ ಅಧಿಕಾರಿಗಳಾದ ಚಿಕ್ಕನಾಯಕನಹಳ್ಳಿ ತಾಲ್ಲೂಕು ಸಿಗೇಬಾಗಿ ಎಚ್.ಈ.ಪ್ರಿಯಾಂಕ, ಹಂದನಕೆರೆ ಎಸ್.ಎನ್.ಲತಾಮಣಿ, ತಿಪಟೂರು ವಿಜ್ಞಸಂತೆಯ ಚಂದನಾ, ತುರುವೇಕೆರೆ ಭೂದಾಖಲೆ ಸಹಾಯಕ ನಿರ್ದೇಶಕ ಸಿ.ಜಗದೀಶ್ ಆಯ್ಕೆ ಆಗಿದ್ದಾರೆ.
ಹಾವೇರಿಯಲ್ಲಿ ಫೆ. 14ರಂದು ನಡೆಯಲಿರುವ ಕಂದಾಯ ಇಲಾಖೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನಾ ಪತ್ರ ನೀಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.