ADVERTISEMENT

ತುಮಕೂರು | ಸಹಿ ನಕಲು: ಆರು ಮಂದಿ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 23:58 IST
Last Updated 17 ಫೆಬ್ರುವರಿ 2026, 23:58 IST
   

ತುಮಕೂರು: ಕಂಪನಿಯ ಲೆಟರ್‌ಹೆಡ್‌, ಮೊಹರು, ಸಹಿ ನಕಲು ಮಾಡಿ, ಸುಳ್ಳು ಅನುಭವ ಪ್ರಮಾಣ ಪತ್ರ ಪಡೆದ ಆರೋಪದ ಮೇರೆಗೆ ಬೆಂಗಳೂರಿನ ಅಶ್ವಿನ್‌ ಅಶ್ವತ್ಥರಾಮ ಸೇರಿ 6 ಜನರ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸನ್‌ ಬಯೋ ಫ್ಯೂಯಲ್‌ ಪ್ರೈ.ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಭದ್ರಾರಾಧ್ಯ ಅವರು ನೀಡಿದ ದೂರಿನ ಆಧಾರದ ಮೇಲೆ ಬೆಂಗಳೂರಿನ ಅಶ್ವಿನ್‌ ಅಶ್ವತ್ಥರಾಮ, ಗೋವಿಂದಪ್ಪ, ಶ್ರೀರಾಮಚಂದ್ರ, ಜಯಶ್ರೀ ಅಶ್ವತ್ಥರಾಮ, ಟಿ.ಎಸ್‌.ಜಗದೀಶ್‌, ಶ್ರೀನಿವಾಸ ಎಂಬುವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT