ADVERTISEMENT

ಸಲಾಕೆಗಳಡಿ ಸಿಲುಕಿಕೊಂಡ ಕಾಲು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2019, 9:49 IST
Last Updated 7 ಡಿಸೆಂಬರ್ 2019, 9:49 IST
ಕಬ್ಬಿಣದ ಸಲಾಕೆಗಳ ಸಂಧಿಗೆ ಕಾಲು ಸಿಲುಕಿಕೊಂಡಿರುವುದು
ಕಬ್ಬಿಣದ ಸಲಾಕೆಗಳ ಸಂಧಿಗೆ ಕಾಲು ಸಿಲುಕಿಕೊಂಡಿರುವುದು   

ತುಮಕೂರು: ನಗರದ ಪ್ರವಾಸಿ ಮಂದಿರದ ಮುಂಭಾಗ ಚರಂಡಿ ಮೇಲ್ಭಾಗದಲ್ಲಿ ಅಳವಡಿಸಿರುವ ಕಬ್ಬಿಣದ ಸಲಾಕೆಗಳ ಸಂಧಿಗೆ ಶಿರಾಗೇಟ್ ನಿವಾಸಿ ಮಾರುತಿ ಎಂಬುವವರ ಕಾಲು ಸಿಲುಕಿಕೊಂಡ ಪರಿಣಾಮ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನೋವು ಅನುಭವಿಸಿದರು.

ತಕ್ಷಣವೇ ಕಚೇರಿ ಒಳಗಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾಕಲ್ಯಾಣ್ ಸ್ಥಳಕ್ಕೆ ಧಾವಿಸಿ ಕಾಲು ಹೊರತೆಗೆಯಲು ಸಹಕರಿಸಿದರೂ ಪ್ರಯೋಜನವಾಗಲಿಲ್ಲ. ಬಳಿಕ ಪೋಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ದಳ ಕಚೇರಿಗೆ ಕರೆ ಮಾಡಿ ಸಂಬಂಧಪಟ್ಟವರನ್ನು ಕರೆಯಿಸಿ ಸಲಾಖೆಯನ್ನು ಸಡಿಲಿಸಿ ಕಾಲನ್ನು ಹೊರತೆಗೆಯಲಾಯಿತು.

ಘಟನೆಗೆ ತಕ್ಷಣ ಸ್ಪಂದಿಸಿದ ಸಿಇಒ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.