
ತುಮಕೂರು: ತಾಲ್ಲೂಕಿನ ಹೆತ್ತೇನಹಳ್ಳಿ ಮಾರಮ್ಮ ದೇವಿಯ ತಾಳಿ ಕಳವಾಗಿಲ್ಲ. ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಹಾಗೂ ಅವರ ಬಳಗದವರು ತಾಳಿ ಕಳವಾಗಿದೆ ಎಂದು ಅಪಪ್ರಚಾರ ಮಾಡಿದ್ದಾರೆ ಎಂದು ಮಾರಮ್ಮ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ತಿಮ್ಮೇಗೌಡ ಇಲ್ಲಿ ಭಾನುವಾರ ಹೇಳಿದರು.
‘ದೇವಾಲಯದಲ್ಲಿ 43 ಗ್ರಾಂ ಚಿನ್ನ ಕಳವಾಗಿದ್ದು, ಅದರಲ್ಲಿ 20 ಗ್ರಾಂ ಸಿಕ್ಕಿದೆ. ಮಾಜಿ ಶಾಸಕರು ಮತ್ತು ಅವರ ಆಪ್ತ ಜಗದೀಶ್ ಹೊಸ ತಾಳಿ ತಂದು ದೇವಿಗೆ ಸಮರ್ಪಣೆ ಮಾಡಿ ವಿವಾದ ಸೃಷ್ಟಿಸಿದ್ದಾರೆ. ಧಾರ್ಮಿಕ ವಿಚಾರದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಜಗದೀಶ್ ₹30 ಲಕ್ಷ ದೇಣಿಗೆ ಕೊಟ್ಟಿದ್ದಾರೆ ಎಂದು ಮಾಜಿ ಶಾಸಕರು ಹೇಳಿದ್ದಾರೆ. ಆದರೆ ಅವರು ನೀಡಿರುವುದು ₹7.35 ಲಕ್ಷ ಮಾತ್ರ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದೇವಿಯ ವಿಚಾರದಲ್ಲಿ ಸುಳ್ಳು ಹೇಳಬಾರದು. ಜಗದೀಶ್ ಹಣ ನೀಡಿದ ಬಗ್ಗೆ ಅಗತ್ಯ ದಾಖಲೆ ಕೊಟ್ಟು, ಸ್ಪಷ್ಟನೆ ನೀಡಬೇಕು ಎಂದರು.
ಹನುಂತರಾಯಪ್ಪ, ಮಾಯಣ್ಣ, ಗಿರೀಶ್, ಜಗದೀಶ್, ರವಿಕುಮಾರ್, ನರಸಿಂಹಮೂರ್ತಿ, ವೆಂಕಟೇಶ್, ಶಂಕರಣ್ಣ, ರಾಕೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.