ತುಮಕೂರು: ಗ್ರೇಟರ್ ನೋಯ್ಡಾ ನಂತರ ಜಿಲ್ಲೆಯಲ್ಲಿ ಕೈಗಾರಿಕಾ ಬೆಳವಣಿಗೆ ವೇಗವಾಗಿ ಸಾಗಿದೆ ಎಂದು ಬ್ಯಾಂಕ್ ಆಫ್ ಬರೋಡ ಬೆಂಗಳೂರು ವಲಯದ ವ್ಯವಹಾರ ಅಭಿವೃದ್ಧಿ ವಿಭಾಗದ ಸಹಾಯಕ ಮುಖ್ಯ ವ್ಯವಸ್ಥಾಪಕ ಸುಮಿತ್‍ಕುಮಾರ್ ಮಿಶ್ರಾ ಹೇಳಿದರು.
ನಗರದಲ್ಲಿ ಶುಕ್ರವಾರ ಬ್ಯಾಂಕ್ ಆಫ್ ಬರೋಡ ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳ ವಲಯದಿಂದ ಆಯೋಜಿಸಿದ್ದ ಗ್ರಾಹಕ ಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಣ್ಣ ಮತ್ತು ಮಧ್ಯಮ ವಲಯದ ಕೈಗಾರಿಕೆಗಳು ದೇಶದ ಪ್ರಗತಿಗೆ ಹೆಚ್ಚಿನ ಪ್ರಮಾಣದಲ್ಲಿ ಕೊಡುಗೆ ನೀಡುತ್ತಿವೆ. ಹಾಗಾಗಿ ಈ ವಲಯದ ಉದ್ಯಮ ಪ್ರಗತಿಗೆ ಬ್ಯಾಂಕ್ ಉತ್ತೇಜನ ನೀಡುತ್ತಿದೆ. ಸ್ಥಳೀಯ ಆದ್ಯತೆ ಆಧರಿಸಿ ಯುವಜನರಿಗೆ ಅಗತ್ಯ ತರಬೇತಿ ಜತೆಗೆ ಉದ್ದಿಮೆ ತೆರೆಯಲು ಹಣಕಾಸಿನ ನೆರವು ನೀಡಲಾಗುತ್ತಿದೆ ಎಂದರು.
ಬೆಂಗಳೂರು ವಿಭಾಗದ ಎಜಿಎಂ ರವಿ ಪಾಠಕ್, ‘ಆರೋಗ್ಯ ಧಾಮ, ಸಪ್ಲೆಚೈನ್ ಫೈನಾನ್ಸ್, ಆಸ್ತಿ ಖರೀದಿ, ಶಿಕ್ಷಣ, ನಿರ್ಮಾಣ ಕ್ಷೇತ್ರ, ಮಹಿಳಾ ಸ್ವಾವಲಂಬನೆ ಸೇರಿದಂತೆ ಇನ್ನಿತರ ವಿಭಾಗಗಳಿಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ’ ಎಂದು ತಿಳಿಸಿದರು.
ತುಮಕೂರು ಶಾಖೆ ವ್ಯವಸ್ಥಾಪಕ ಎಂ.ಎಸ್.ಆರ್.ರಾವ್, ಹಿರಿಯ ವ್ಯವಸ್ಥಾಪಕ ಪವನ್ ದೇಶಪಾಂಡೆ, ಸಿಎಎಸ್ಎ ಮಾರುಕಟ್ಟೆ ಅಧಿಕಾರಿ ಎ.ಕೊದಂಡರಾಮು ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.