
ತುರುವೇಕೆರೆ: ಮೈಸೂರು– ಚಿತ್ರದುರ್ಗದ ರೈಲ್ವೆ ಮಾರ್ಗಕ್ಕೆ ಚಾಲನೆ ನೀಡಲು ಕೇಂದ್ರದ ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಅವರಲ್ಲಿ ಮನವಿ ಮಾಡಿಕೊಳ್ಳುವೆ ಎಂದು ನೈರುತ್ಯ ರೈಲ್ವೇ ಹುಬ್ಬಳ್ಳಿ ವಿಭಾಗದ ಬಳಕೆದಾರರ ಸಲಹಾ ಸಮಿತಿ ಸದಸ್ಯರಾಗಿ ನೇಮಕವಾಗಿರುವ ಕೊಂಡಜ್ಜಿ ವಿಶ್ವನಾಥ್ ಹೇಳಿದರು.
ತಾಲ್ಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಕೊಂಡಜ್ಜಿ ವಿಶ್ವನಾಥ್ ಅಭಿಮಾನಿ ಬಳಗ ಹಾಗೂ ಗ್ರಾಮಸ್ಥರು ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ತುರುವೇಕೆರೆ ತಾಲ್ಲೂಕಿನ ಸಂಪಿಗೆ, ಅಮ್ಮಸಂದ್ರ ಮತ್ತು ಬಾಣಸಂದ್ರದ ಮೂಲಕ ಹಲವಾರು ರೈಲುಗಳು ಸಂಚಾರ ಮಾಡುತ್ತಿವೆ. ರೈಲ್ವೆ ಪ್ರಯಾಣಿಕರು ಇನ್ನೂ ಹಲವು ಅಭಿವೃದ್ಧಿ ಕಾರ್ಯಗಳು ಈ ಪ್ರದೇಶಗಳಲ್ಲಿ ಆಗಬೇಕೆಂದು ತಿಳಿಸಿದ್ದಾರೆ. ಮೈಸೂರು– ಚಿತ್ರದುರ್ಗ ರೈಲ್ವೆ ಮಾರ್ಗವನ್ನು ಸಿದ್ದಪಡಿಸಬೇಕೆಂಬುದೂ ಜನರ ಆಗ್ರಹವಿದೆ ಎಂದರು.
ಡಾ.ಚೌದ್ರಿ ನಾಗೇಶ್, ಪುಟ್ಟರಂಗಪ್ಪ, ಹಾಲೇಗೌಡ, ಕೆ.ಎಸ್. ಜವರಪ್ಪ (ಪುಟ್ಟಣ್ಣ), ಕೆ.ಜೆ.ಲೋಕೇಶ್, ಡಿ.ಎಸ್.ಸುದರ್ಶನ್, ಡಿ.ಕೆ.ರತೀಶ್, ಸಿ.ಟಿ.ತಿಮ್ಮಪ್ಪ, ಕಂಚಿಗನಾಯ್ಕ, ಬಿ.ಸಿ.ಚೇತನ, ಕೆ.ಎಸ್.ಕುಮಾರ್, ಪಟೇಲ್ ಚಂದ್ರಶೇಖರ್, ಕೆ.ಎಸ್.ರಾಜಶೇಖರ್, ಗಿರೀಶ್, ರಾಮೇಗೌಡ, ನವೀನ್ ಕುಮಾರ್, ಜಯರಾಮ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.