
ತುರುವೇಕೆರೆ: ತಾಲ್ಲೂಕಿನ ಕೊಂಡಜ್ಜಿ ಗ್ರಾಮ ಪಂಚಾಯಿತಿಯ ಗೊಪ್ಪೇನಹಳ್ಳಿ ನಿವಾಸಿ ಧನುಷ್(18) ಜಿ.ಕೆ ಪಟ್ಟಣದ ವಿವಿ ಶಾಲೆ ಹಿಂಭಾಗದ ದಾಸನಕಟ್ಟೆಗೆ ಬಿದ್ದು ಮೃತಪಟ್ಟಿದ್ದಾರೆ.
ಧನುಷ್ ಗುಡ್ಡೇನಹಳ್ಳಿ ಡಿಪ್ಲೊಮಾ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿ. ಎಂದಿನಂತೆ ಬೆಳಗ್ಗೆ ಮನೆಯಿಂದ ಕಾಲೇಜಿಗೆ ಹೋಗುತ್ತೇನೆ ಎಂದು ತುರುವೇಕೆರೆಗೆ ತೆರಳಿದ್ದರು. ಕೆಲ ಗಂಟೆ ನಂತರ ಮನೆಯವರು ಕರೆ ಮಾಡಿದರೂ ಧನುಷ್ ಸ್ವೀಕರಿಸದ ಕಾರಣ ಅನುಮಾನಗೊಂಡ ವಿಚಾರಿಸಿದಾಗ ದಾಸನಕಟ್ಟೆ ಬಳಿ ಬ್ಯಾಗ್, ಫೋನ್, ಚಪ್ಪಲಿ ಬಿಟ್ಟು ನೀರಿಗಿಳಿದಾಗ ಕಾಲು ಜಾರಿ ಬಿದ್ದು ಮೃತಪಟ್ಟಿರುವುದು ತಿಳಿದಿದೆ.
ತುರುವೇಕೆರೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಕಾರ್ಯಚರಣೆ ನಡೆಸಿದರು. ನಂತರ ತಿಪಟೂರಿನಿಂದ ಬೋಟ್ ತರಿಸಿ ನೀರಿನೊಳಗೆ ಕ್ಯಾಮೆರಾ ಬಿಟ್ಟು ಶವ ಹುಡುಕಿ ಹೊರತೆಗೆದಿದ್ದಾರೆ.
ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.