ADVERTISEMENT

ಎರಡು ದಿನ ಕ್ರಿಕೆಟ್ ಪಂದ್ಯಾವಳಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 2:59 IST
Last Updated 9 ಜುಲೈ 2025, 2:59 IST
ತುಮಕೂರಿನಲ್ಲಿ ಮಂಗಳವಾರ ಜಿಲ್ಲಾ ಫೋಟೊ ಮತ್ತು ವಿಡಿಯೋಗ್ರಾಫರ್ಸ್ ಸಂಘದ ಪದಾಧಿಕಾರಿಗಳ ಸಭೆ ನಡೆಯಿತು. ಕ್ರಿಕೆಟ್ ಪಂದ್ಯಾವಳಿಯ ಪೋಸ್ಟರ್ ಬಿಡುಗಡೆ ಮಾಡಲಾಯಿತು
ತುಮಕೂರಿನಲ್ಲಿ ಮಂಗಳವಾರ ಜಿಲ್ಲಾ ಫೋಟೊ ಮತ್ತು ವಿಡಿಯೋಗ್ರಾಫರ್ಸ್ ಸಂಘದ ಪದಾಧಿಕಾರಿಗಳ ಸಭೆ ನಡೆಯಿತು. ಕ್ರಿಕೆಟ್ ಪಂದ್ಯಾವಳಿಯ ಪೋಸ್ಟರ್ ಬಿಡುಗಡೆ ಮಾಡಲಾಯಿತು    

ತುಮಕೂರು: ಜಿಲ್ಲಾ ಫೋಟೊ ಮತ್ತು ವಿಡಿಯೋಗ್ರಾಫರ್ಸ್ ಸಂಘ, ಜಿಲ್ಲಾ ಹಾಗೂ ತಾಲ್ಲೂಕು ಛಾಯಾಗ್ರಾಹಕರ ಸಂಘದ ಆಶ್ರಯದಲ್ಲಿ ಫೋಟೊ ಮತ್ತು ವಿಡಿಯೋಗ್ರಾಫರ್‌ಗಳ ರಾಜ್ಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಜುಲೈ 19 ಮತ್ತು 20ರಂದು ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.

ವಿಜೇತ ತಂಡಕ್ಕೆ ಮೊದಲ ಬಹುಮಾನವಾಗಿ ₹1 ಲಕ್ಷ ನಗದು, ಆಕರ್ಷಕ ಟ್ರೋಫಿ ಹಾಗೂ ಎರಡನೇ ಬಹುಮಾನವಾಗಿ ₹50 ಸಾವಿರ ನಗದು ಬಹುಮಾನ ನೀಡಲಾಗುತ್ತದೆ. ಜುಲೈ 16ರ ಒಳಗೆ ತಂಡಗಳು ಹೆಸರು ನೋಂದಾಯಿಸಿಕೊಳ್ಳಬೇಕು. ಹೊರ ಜಿಲ್ಲೆಗಳಿಂದ ಬರುವ ತಂಡಗಳಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ.

ನೋಂದಣಿ ಹಾಗೂ ಮಾಹಿತಿಗಾಗಿ ನವೀನ್‍ಕುಮಾರ್ ಮೊ 9844100532, ರಾಕೇಶ್ ಮೊ 9986780103, ಟಿ.ಆರ್.ವಿನಯ್‍ಕುಮಾರ್ ಮೊ 7899998855 ಸಂಪರ್ಕಿಸಬಹುದು.

ADVERTISEMENT

ನಗರದಲ್ಲಿ ಮಂಗಳವಾರ ಜಿಲ್ಲಾ ಫೋಟೊ ಮತ್ತು ವಿಡಿಯೋಗ್ರಾಫರ್ಸ್ ಸಂಘದ ಅಧ್ಯಕ್ಷ ಟಿ.ಎಚ್.ಅನಿಲ್‍ಕುಮಾರ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸಂಘ ಪ್ರಮುಖರಾದ ಎನ್.ವೆಂಕಟೇಶ್, ನವೀನ್‍ಕುಮಾರ್, ರಮೇಶ್, ವಿನಯ್‍ಕುಮಾರ್, ರಾಜೇಶ್, ರೇಣುಕಾಪ್ರಸಾದ್, ಪ್ರದೀಪ್, ಸಂತೋಷ್, ವಿನಯ್, ವೀರಭದ್ರಯ್ಯ, ಸಿದ್ಧರಾಜು, ಶ್ರೀನಿವಾಸ್, ಸಾದಿಕ್, ಸಿದ್ಧೇಶ್, ಸಿದ್ಧಾರ್ಥ್ ಮೊದಲಾದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.