
ತುಮಕೂರು: ತಾಲ್ಲೂಕಿನ ಬಾಣಾವರ ಗೇಟ್ ಬಳಿ ಭಾನುವಾರ ಸಂಜೆ ಮೂರು ಕಾರುಗಳ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, ಐದು ಜನ ಗಾಯಗೊಂಡಿದ್ದಾರೆ.
ನಗರದ ಯಾದವ ನಗರದ ಸುರೇಶ್ (55), ಮುರಳಿ (60) ಮೃತರು. ಸುರೇಶ್ ಗುಬ್ಬಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರು. ಸೈಬರ್ ಠಾಣೆಯ ಇನ್‌ಸ್ಪೆಕ್ಟರ್ ರಾಮಕೃಷ್ಣಪ್ಪ, ಜೆಡಿಎಸ್ ವಕ್ತಾರ ಜಯಣ್ಣ, ಮಂಜುನಾಥ್ ಸೇರಿದಂತೆ 5 ಜನ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಮಕೃಷ್ಣಪ್ಪ ಸ್ನೇಹಿತರ ಜತೆಗೆ ಆದಿಚುಂಚನಗಿರಿಗೆ ಹೋಗಿ ಕುಣಿಗಲ್ ಮಾರ್ಗವಾಗಿ ವಾಪಸ್ ಆಗುತ್ತಿದ್ದರು. ಇದೇ ವೇಳೆ ತುಮಕೂರು ಕಡೆಯಿಂದ ತೆರಳುತ್ತಿದ್ದ ಕಾರು ಮುಂದೆ ಚಲಿಸುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿಯಾಗಿ ಎದುರುಗಡೆ ಬರುತ್ತಿದ್ದ ರಾಮಕೃಷ್ಣಪ್ಪ ಅವರಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಇದೇ ಕಾರಿನಲ್ಲಿದ್ದ ಸುರೇಶ್, ಮುರಳಿ ಮೃತಪಟ್ಟಿದ್ದಾರೆ.
ಹೆಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.