ತುಮಕೂರು: ಈ ವಾರ ಮಾರುಕಟ್ಟೆಯಲ್ಲಿ ಯಾವ ತರಕಾರಿ ಬೆಲೆಯೂ ಹೆಚ್ಚಳವಾಗಿಲ್ಲ. ಸೊಪ್ಪು ಮತ್ತಷ್ಟು ಅಗ್ಗವಾಗಿದ್ದು, ಹಣ್ಣು, ಬೇಳೆ, ಧಾನ್ಯ, ಕೋಳಿ, ಮೀನು ಧಾರಣೆ ಇಳಿಕೆಯತ್ತ ಸಾಗಿದೆ.
ಟೊಮೊಟೊ ಇಳಿಕೆ: ಕಳೆದ ವಾರ ದುಬಾರಿಯಾಗಿದ್ದ ಟೊಮೆಟೊ ದರ ಮತ್ತೆ ಕುಸಿತ ಕಂಡಿದೆ. ಕೆ.ಜಿಗೆ ₹10 ಕಡಿಮೆಯಾಗಿದ್ದು, ₹40–50ಕ್ಕೆ ತಗ್ಗಿದೆ. ತುಮಕೂರು ಮಾರುಕಟ್ಟೆಯಲ್ಲಿ ಈ ದರ ಸಿಗುತ್ತಿದ್ದರೆ, ಬೆಂಗಳೂರು ಮಾರುಕಟ್ಟೆಯಲ್ಲಿ ಮತ್ತಷ್ಟು ಕಡಿಮೆಯಾಗಿದೆ.
ಉಳಿದಂತೆ ಯಾವ ತರಕಾರಿ ಬೆಲೆಯೂ ಏರಿಕೆಯಾಗಿಲ್ಲ. ಗೆಡ್ಡೆಕೋಸು, ಹಾಗಲಕಾಯಿ ತಲಾ ಕೆ.ಜಿಗೆ ₹20 ಕಡಿಮೆಯಾಗಿದ್ದು, ಮೂಲಂಗಿ ದರ ಅರ್ಧದಷ್ಟು ಕುಸಿದಿದೆ. ಎಲೆಕೋಸು, ನುಗ್ಗೇಕಾಯಿ ಮತ್ತಷ್ಟು ಅಗ್ಗವಾಗಿದೆ. ಇತರೆ ತರಕಾರಿಗಳ ದರ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ತರಕಾರಿ ಬೆಲೆ ಮುಂದಿನ ದಿನಗಳಲ್ಲಿ ಮತ್ತಷ್ಟು ಅಗ್ಗವಾಗಬಹುದು ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
ಸೊಪ್ಪು ಕೇಳುವವರಿಲ್ಲ: ಸೊಪ್ಪಿನ ಬೆಲೆ ಸದ್ಯಕ್ಕೆ ಚೇತರಿಸುವಂತೆ ಕಾಣುತ್ತಿಲ್ಲ. ಈ ವಾರ ಸಹ ಮತ್ತೆ ಅಲ್ಪ ಪ್ರಮಾಣದಲ್ಲಿ ತಗ್ಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹20, ಸಬ್ಬಕ್ಕಿ ಕೆ.ಜಿ ₹20–25, ಮೆಂತ್ಯ ಸೊಪ್ಪು ಕೆ.ಜಿ ₹30–40, ಪಾಲಕ್ ಸೊಪ್ಪು (ಕಟ್ಟು) ₹30ಕ್ಕೆ ಇಳಿಕೆಯಾಗಿದೆ.
ದ್ರಾಕ್ಷಿ ದುಬಾರಿ: ಬಹುತೇಕ ಯಥಾಸ್ಥಿತಿ ಕಾಯ್ದುಕೊಂಡಿದ್ದ ಹಣ್ಣಿನ ಧಾರಣೆ ತುಸು ಕಡಿಮೆಯಾಗಿದೆ. ದಾಳಿಂಬೆ, ಕರಬೂಜ, ಕಲ್ಲಂಗಡಿ ದರ ಇಳಿಕೆಯಾಗಿದ್ದರೆ, ಮೂಸಂಬಿ ಅಲ್ಪ ಏರಿಕೆಯಾಗಿದೆ. ದ್ರಾಕ್ಷಿ ಬೆಲೆ ಒಮ್ಮೆಲೆ ಕೆ.ಜಿಗೆ ₹50 ದುಬಾರಿಯಾಗಿದೆ. ಪಪ್ಪಾಯ ಹಣ್ಣಿಗೆ ಉತ್ತಮ ಬೆಲೆ ಇದೆ. ತೋತಾಪುರಿ ಮಾವು ಕೆ.ಜಿ ₹120, ಬೇನಿಷಾ ಕೆ.ಜಿ ₹120ಕ್ಕೆ ಸಿಗುತ್ತಿದೆ.
ಅಡುಗೆ ಎಣ್ಣೆ: ಅಡುಗೆ ಎಣ್ಣೆ ಬೆಲೆ ಕೊಂಚ ಏರಿಕೆ ದಾಖಲಿಸಿದ್ದು, ಗೋಲ್ಡ್‌ವಿನ್ನರ್ ಕೆ.ಜಿ ₹113, ಪಾಮಾಯಿಲ್ ಕೆ.ಜಿ ₹88–90, ಕಡಲೆಕಾಯಿ ಎಣ್ಣೆ ಕೆ.ಜಿ ₹155–160ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.
ಬಟಾಣಿ ಏರಿಕೆ: ವಾರದಿಂದ ವಾರಕ್ಕೆ ಬಟಾಣಿ ಧಾರಣೆ ಏರಿಕೆಯತ್ತ ಹೆಜ್ಜೆ ಹಾಕಿದೆ. ಕಳೆದ ಕೆಲ ತಿಂಗಳ ಹಿಂದೆ ಕೆ.ಜಿ 100ರ ಆಸುಪಾಸಿನಲ್ಲಿದ್ದರೆ, ಈಗ ಕೆ.ಜಿ ₹130–135ಕ್ಕೆ ಜಿಗಿದಿದೆ. ಕಡಲೆ ಕಾಳು ಹೊರತುಪಡಿಸಿದರೆ ಬಹುತೇಕ ಬೇಳೆ, ಧಾನ್ಯಗಳ ದರ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ.
ಮಸಾಲೆ ಪದಾರ್ಥ: ಮಸಾಲೆ ಪದಾರ್ಥಗಳ ಬೆಲೆ ಬಹುತೇಕ ಯಥಾಸ್ಥಿತಿಯಲ್ಲಿ ಮುಂದುವರಿದಿದ್ದು, ಏಲಕ್ಕಿ ಕೆ.ಜಿಗೆ 100–200 ಕಡಿಮೆಯಾಗಿದೆ. ಮೆಣಸಿನಕಾಯಿ, ಕಾಳು ಮೆಣಸು, ಜೀರಿಗೆ, ಲವಂಗ, ಬಾದಾಮಿ ಅಲ್ಪ ಇಳಿಕೆಯಾಗಿದೆ. ಗೋಡಂಬಿ ಮತ್ತೆ ದುಬಾರಿಯಾಗಿದೆ.
ಧನ್ಯ ಕೆ.ಜಿ ₹100–160, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹250–260, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹190–220, ಹುಣಸೆಹಣ್ಣು ₹100–150, ಬೆಲ್ಲ ಕೆ.ಜಿ ₹50–55, ಕಾಳುಮೆಣಸು ಕೆ.ಜಿ ₹750–800, ಜೀರಿಗೆ ಕೆ.ಜಿ ₹320–350, ಸಾಸಿವೆ ಕೆ.ಜಿ ₹80–85, ಮೆಂತ್ಯ ಕೆ.ಜಿ ₹85–92, ಚಕ್ಕೆ ಕೆ.ಜಿ ₹260–270, ಲವಂಗ ಕೆ.ಜಿ ₹850–900, ಗುಣಮಟ್ಟದ ಗಸಗಸೆ ಕೆ.ಜಿ ₹1,250–1,300, ಏಲಕ್ಕಿ ಕೆ.ಜಿ ₹2,800–3,000, ಬಾದಾಮಿ ಕೆ.ಜಿ ₹620–650, ಗೋಡಂಬಿ ಕೆ.ಜಿ ₹850–900, ಒಣದ್ರಾಕ್ಷಿ ಕೆ.ಜಿ ₹190–200ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.
ಕೋಳಿ ಮಾಂಸ: ಕೋಳಿ ಮಾಂಸದ ಬೆಲೆ ತುಸು ಅಗ್ಗವಾಗಿದ್ದು, ಬ್ರಾಯ್ಲರ್ ಕೋಳಿ ಕೆ.ಜಿ ₹130, ರೆಡಿ ಚಿಕನ್ ಕೆ.ಜಿ ₹220, ಸ್ಕಿನ್‌ಲೆಸ್ ಕೆ.ಜಿ ₹240, ಮೊಟ್ಟೆ ಕೋಳಿ (ಫಾರಂ) ಕೆ.ಜಿ ₹110ಕ್ಕೆ ಸಿಗುತ್ತಿದೆ.
ಮೀನು ಇಳಿಕೆ: ಮೀನಿನ ಧಾರಣೆ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಬಂಗುಡೆ ಕೆ.ಜಿ ₹320, ಬೊಳಿಂಜರ್ ಕೆ.ಜಿ ₹210, ಅಂಜಲ್ ಕೆ.ಜಿ ₹1,230, ಬಿಳಿಮಾಂಜಿ ಕೆ.ಜಿ ₹1,130, ಕಪ್ಪುಮಾಂಜಿ ಕೆ.ಜಿ ₹980, ಇಂಡಿಯನ್ ಸಾಲ್ಮನ್ ಕೆ.ಜಿ ₹980, ಸೀಗಡಿ ಕೆ.ಜಿ ₹450–680, ಏಡಿ ಕೆ.ಜಿ 410ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.
ದರ ಪಟ್ಟಿ
ಹಣ್ಣು (ಬೆಲೆ ಕೆ.ಜಿ ₹)
ಸೇಬು;220
ದಾಳಿಂಬೆ;180
ಮೂಸಂಬಿ;120
ಕಿತ್ತಳೆ;150
ಸಪೋಟ;100
ಏಲಕ್ಕಿ ಬಾಳೆ;85
ಪಚ್ಚಬಾಳೆ;40
ಸೀಬೆ;140
ಪೈನಾಪಲ್;80
ಪಪ್ಪಾಯ;40
ಕರಬೂಜ;40
ಕಲ್ಲಂಗಡಿ;20
ದ್ರಾಕ್ಷಿ;150
ಧಾನ್ಯ (ಬೆಲೆ ಕೆ.ಜಿ ₹) (ಮಂಡಿಪೇಟೆ)
ತೊಗರಿ ಬೇಳೆ;170–175
ಕಡಲೆ ಬೇಳೆ;85–90
ಉದ್ದಿನ ಬೇಳೆ;135–145
ಹೆಸರು ಬೇಳೆ;110–115
ಕಡಲೆಕಾಳು;78–82
ಹೆಸರು ಕಾಳು;125–130
ಅಲಸಂದೆ;105–110
ಅವರೆಕಾಳು;150–160
ಹುರುಳಿಕಾಳು;78–80
ಹುರಿಗಡಲೆ;100–110
ಬಟಾಣಿ;130–135
ಕಡಲೆ ಬೀಜ;125–130
ಗೋಧಿ;40–45
ಸಕ್ಕರೆ;40–42
ತರಕಾರಿ (ಬೆಲೆ ಕೆ.ಜಿ ₹) (ಅಂತರಸನಹಳ್ಳಿ ಮಾರುಕಟ್ಟೆ)
ಬೀನ್ಸ್;30–40
ಕ್ಯಾರೇಟ್;50–60
ಬೀಟ್ರೂಟ್;30–40
ಈರುಳ್ಳಿ;30–35
ಬೆಳ್ಳುಳ್ಳಿ;200–220
ಟೊಮೆಟೊ;40–50
ಆಲೂಗಡ್ಡೆ;35–40
ಗೆಡ್ಡೆಕೋಸು;30–40
ಮೂಲಂಗಿ;15–20
ಬೆಂಡೆಕಾಯಿ;20–25
ಬದನೆಕಾಯಿ;30–40
ಎಲೆಕೋಸು;20–25
ಹೂಕೋಸು(1ಕ್ಕೆ);30
ತೊಂಡೆಕಾಯಿ;30–40
ಹಾಗಲಕಾಯಿ;30–40
ನುಗ್ಗೆಕಾಯಿ;70–80
ಮೆಣಸಿನಕಾಯಿ;50–60
ಕ್ಯಾಪ್ಸಿಕಂ;40–50
ಶುಂಠಿ;80–100
ಸೌತೆಕಾಯಿ 1ಕ್ಕೆ;4–5
ನಿಂಬೆಹಣ್ಣು 1ಕ್ಕೆ;2–3
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.