ADVERTISEMENT

ಕುಣಿಗಲ್‌: ವಿದ್ಯಾ ಚೌಡೇಶ್ವರಿ ವರ್ಧಂತಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 6:19 IST
Last Updated 19 ಜನವರಿ 2026, 6:19 IST
ಕುಣಿಗಲ್ ತಾಲ್ಲೂಕಿನ ಶೃಂಗೇರಿ ಶಾರದಾ ಪೀಠದ ವಿದ್ಯಾ ಚೌಡೇಶ್ವರಿ ವರ್ಧಂತಿ ನಡೆಯಿತು
ಕುಣಿಗಲ್ ತಾಲ್ಲೂಕಿನ ಶೃಂಗೇರಿ ಶಾರದಾ ಪೀಠದ ವಿದ್ಯಾ ಚೌಡೇಶ್ವರಿ ವರ್ಧಂತಿ ನಡೆಯಿತು   

ಕುಣಿಗಲ್: ತಾಲ್ಲೂಕಿನ ಕೆ.ಜಿ. ದೇವಪಟ್ಟಣದ (ಹಂಗರಹಳ್ಳಿ) ಶೃಂಗೇರಿ ಶಾರದಾ ಪೀಠದ ಶಾಖಾ ಮಠ ವಿದ್ಯಾ ಚೌಡೇಶ್ವರಿ ವರ್ಧಂತಿ ಮಹೋತ್ಸವ ಶನಿವಾರ ನಡೆಯಿತು.

ಕಾರ್ಯಕ್ರಮದಲ್ಲಿ ಗರ್ಭಗುಡಿಯ 2ನೇ ಬಾಗಿಲಿಗೆ ‘ರಜತ ದ್ವಾರ’ (ಬೆಳ್ಳಿ ಬಾಗಿಲು) ಹಾಗೂ ದೇವಿಗೆ ಸ್ವರ್ಣರಜತ ಪ್ರಭಾವಳಿ ಮತ್ತು ಶೃಂಗೇರಿ ಶಾರದಾ ಪೀಠದ ವಿದುಶೇಖರ ಭಾರತಿ ಸ್ವಾಮೀಜಿ ಆಶೀರ್ವದಿಸಿ ಕಳುಹಿಸಿಕೊಟ್ಟಿದ್ದ ‘ಪವಿತ್ರ ವಸ್ತ್ರ’ ಸಮರ್ಪಿಸಲಾಯಿತು.

ಚಾಮರಾಜನಗರದ ಪ್ರಸಿದ್ಧ ಕುರುಬನ ಕಟ್ಟೆ ಸಿದ್ದಪ್ಪಾಜಿಯವರ ಮೂಲ ಕಂಡಾಯ, ಚಿಕ್ಕಚೌಡಮ್ಮ, ಹಂಗರಹಳ್ಳಿ ಮತ್ತು ಕವಣಾಪುರ ಬಸವಣ್ಣ, ಮಂಟೇಸ್ವಾಮಿ ಬಸವಣ್ಣ, ಸುಳಿಯಿರಮ್ಮ, ಮುದ್ದು ಮಾದೇಶ್ವರ ಹಾಗೂ ಕದಲೆ ವೆಂಕಟರಮಣ ಸ್ವಾಮಿ ಸೇರಿದಂತೆ ಅನೇಕ ದೈವಗಳ ಉತ್ಸವ ನಡೆಯಿತು.

ADVERTISEMENT

ಶೃಂಗೇರಿ ಶಾರದಾ ಪೀಠದ ವಿದ್ಯಾ ಚೌಡೇಶ್ವರಿ ಅಮ್ಮನವರ ಕ್ಷೇತ್ರದ ಬಾಲ ಮಂಜುನಾಥ ಸ್ವಾಮೀಜಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.