ADVERTISEMENT

ಜಲಾನಯನ ಪ್ರದೇಶ ಅಭಿವೃದ್ಧಿ

ಗಾಂಧಿ ಸಹಜ ಬೇಸಾಯ ಶಾಲೆಯ ನೇತೃತ್ವ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2021, 6:10 IST
Last Updated 26 ಏಪ್ರಿಲ್ 2021, 6:10 IST
ಮಧುಗಿರಿ ತಾಲ್ಲೂಕಿನ ರಂಗಾಪುರ ಗ್ರಾ.ಪಂ ವ್ಯಾಪ್ತಿಯಲ್ಲಿ ಸಹಜ ಬೇಸಾಯದ ಬಗ್ಗೆ ಜಾಗೃತಿ ಮೂಡಿಸಲಾಯಿತು
ಮಧುಗಿರಿ ತಾಲ್ಲೂಕಿನ ರಂಗಾಪುರ ಗ್ರಾ.ಪಂ ವ್ಯಾಪ್ತಿಯಲ್ಲಿ ಸಹಜ ಬೇಸಾಯದ ಬಗ್ಗೆ ಜಾಗೃತಿ ಮೂಡಿಸಲಾಯಿತು   

ತುಮಕೂರು: ಗಾಂಧಿ ಸಹಜ ಬೇಸಾಯ ಶಾಲೆಯ ನೇತೃತ್ವದಲ್ಲಿ ಮಧುಗಿರಿ ತಾಲ್ಲೂಕಿನ ರಂಗಾಪುರ, ಕವಣದಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಲಾನಯನ ಪ್ರದೇಶ ಅಭಿವೃದ್ಧಿಗೆ ಚಾಲನೆ ನೀಡಲಾಯಿತು.

ರಂಗಾಪುರ ಪಂಚಾಯಿತಿಯ ಬೋರಾಗುಂಟೆ, ಗಿಡದಾಗಲಹಳ್ಳಿ, ರಂಗನಹಳ್ಳಿ ವ್ಯಾಪ್ತಿಯ ರೈತರ ಹೊಲ, ಗದ್ದೆ, ತೋಟಗಳನ್ನು ವೀಕ್ಷಿಸಿದ ಸಹಜ ಕೃಷಿ ವಿಜ್ಞಾನಿ ಎಚ್‌.ಮಂಜುನಾಥ್‌, ಬೆಳೆ ವಿನ್ಯಾಸ ಮಾಡಿಕೊಟ್ಟರು.

ಜನರು ಸಾಮೂಹಿಕವಾಗಿ ಪಾಲ್ಗೊಂಡು ಗೋಮಾಳ, ಕಾಡು, ತೊರೆ, ಹಳ್ಳ ಕೊಳ್ಳ, ಕೃಷಿ ಭೂಮಿ ಸರಿಮಾಡಿಕೊಳ್ಳುವ ಮೂಲಕ ಅಂತರ್ಜಲ ಸಂರಕ್ಷಿಸಲು ಶಾಶ್ವತ ಪರಿ
ಹಾರ ಕಂಡುಕೊಳ್ಳಬೇಕು. ಜಲಾನಯನ ಪ್ರದೇಶವನ್ನು ಸಂಪೂರ್ಣ ಚಿಕಿತ್ಸೆ ಮಾಡಲು ಶ್ರಮದಾನ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ADVERTISEMENT

ಗೋಮಾಳ, ದೇವರಕಾಡು, ಗುಂಡು
ತೋಪು, ಕಟ್ಟೆಗಳು ಕುರಿ, ಮೇಕೆ, ನರಿ, ನವಿಲು, ತೋಳ, ಮೊಲಕ್ಕೆ ಆಹಾರ ಒದಗಿಸುತ್ತವೆ. ಗೋಮಾಳದಲ್ಲಿ ಬೆಳೆಯುವ ಹುಲ್ಲು 3ರಿಂದ 4 ಅಡಿ ಉದ್ದ ಬೇರು ಬಿಡುತ್ತದೆ. ಇದರಿಂದ ಮಳೆ ನೀರು ಸರಾಗವಾಗಿ ಭೂಮಿಗೆ ಇಂಗುತ್ತದೆ. ಒಂದು ಎಕರೆಗೆ 30 ಲಕ್ಷ ಲೀಟರ್‌ ನೀರು ಇಂಗಿಸುವ ಸಾಮರ್ಥ್ಯ ಹುಲ್ಲಿಗಿದೆ. ಹುಲ್ಲು ಬೆಳೆಸಿದರೆ ಅಂತರ್ಜಲದ ಮಟ್ಟ ಹೆಚ್ಚುತ್ತದೆ ಎಂದು ಹೇಳಿದರು.

600ರಿಂದ 700 ಮಿ.ಮೀ ಮಳೆಯಾಗುವ ಈ ಪ್ರದೇಶದಲ್ಲಿ ಮಳೆ ನೀರು ಹಿಡಿದಿಟ್ಟುಕೊಳ್ಳಬೇಕು. ಮಣ್ಣಿನ ಕಾರ್ಬನ್‌ ಮಟ್ಟ ಹೆಚ್ಚಿಸಿದರೆ ಆಗ ಹಳ್ಳಿಗಳು ಸುಭಿಕ್ಷವಾಗುತ್ತವೆ ಎಂದರು.

ತುಮಕೂರು ವಿಜ್ಞಾನ ಕೇಂದ್ರದ ಅಧ್ಯಕ್ಷ ಬಿ.ಮರುಳಯ್ಯ, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.