ತುಮಕೂರು: ಅನೈತಿಕ ಸಂಬಂಧಕ್ಕೆ ಅಡ್ಡಿಪಡಿಸಿದ ಪತಿಯನ್ನು ಕೊಲೆ ಮಾಡಿದ್ದ ಯಶೋದಾ (32), ಆಕೆಯ ಪ್ರಿಯಕರ ಮಂಜುನಾಥ್ (28) ಎಂಬಾತನಿಗೆ 3ನೇ ಹೆಚ್ಚುವರಿ ಮತ್ತು ವಿಶೇಷ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ, ತಲಾ ₹50 ಸಾವಿರ ದಂಡ ವಿಧಿಸಿದೆ.
ಆಂಜಿನಪ್ಪ ಮತ್ತು ಯಶೋದಾ ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ನಿವಾಸಿಗಳು. ಮಂಜುನಾಥ್ ಜತೆಗೆ ಯಶೋದಾ ಅಕ್ರಮ ಸಂಬಂಧ ಹೊಂದಿದ್ದರು. ಈ ಬಗ್ಗೆ ಪತಿ, ಪತ್ನಿ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು. ಮಂಜುನಾಥ್‌ನಿಂದ ದೂರ ಇರುವಂತೆ ಅಂಜಿನಪ್ಪ ಸೂಚಿಸಿದ್ದರು. ಇದರಿಂದ ಕುಪಿತರಾದ ಯಶೋದಾ, ಮಂಜುನಾಥ್ 2018ರ ಮೇ 12ರ ಮಧ್ಯರಾತ್ರಿ ಆಂಜಿನಪ್ಪ ಅವರನ್ನು ಕೊಲೆ ಮಾಡಿದ್ದರು.
ಕೊಡಿಗೇನಹಳ್ಳಿ ಠಾಣೆಯಲ್ಲಿ ಕೊಲೆ ಹಾಗೂ ಎಸ್.ಸಿ, ಎಸ್.ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಮಧುಗಿರಿ ಡಿವೈಎಸ್‌ಪಿ ಓ.ಬಿ.ಕಲ್ಲೇಶಪ್ಪ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶರ ವಿಚಾರಣೆ ಸಮಯದಲ್ಲಿ ಆರೋಪ ಸಾಬೀತಾಗಿದ್ದು, ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಜ್ಯೋತಿ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.