ADVERTISEMENT

ಗಾಳಿ: ನೆಲಕ್ಕುರುಳಿದ ವಿದ್ಯುತ್ ಕಂಬ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 5:19 IST
Last Updated 23 ಏಪ್ರಿಲ್ 2021, 5:19 IST
ಮಳೆ, ಗಾಳಿ ರಭಸಕ್ಕೆ ನೆಲಕ್ಕುರುಳಿರುವ ವಿದ್ಯುತ್ ಪರಿವರ್ತಕ ಹಾಗೂ ಕಂಬ
ಮಳೆ, ಗಾಳಿ ರಭಸಕ್ಕೆ ನೆಲಕ್ಕುರುಳಿರುವ ವಿದ್ಯುತ್ ಪರಿವರ್ತಕ ಹಾಗೂ ಕಂಬ   

ತಿಪಟೂರು: ನಗರದಾದ್ಯಂತ ಗುರುವಾರ ಸಂಜೆ ಬಿದ್ದ ಗಾಳಿ, ಮಳೆಗೆ ಹಲವೆಡೆಗಳಲ್ಲಿ ವಿದ್ಯುತ್ ಪರಿವರ್ತಕ ಸೇರಿ, ಕಂಬಗಳು ನೆಲಕ್ಕುರುಳಿವೆ.

ಸಂಜೆ ಬೀಸಿದ ಗಾಳಿ ಗೆ ದೊಡ್ಡಪೇಟೆ ಬಳಿಯ ತಾರಾದೇವಿ ನರ್ಸಿಂಗ್ ಹೋಂ ರಸ್ತೆಯಲ್ಲಿ ವಿದ್ಯುತ್‌ ಪರಿವರ್ತಕದ ಮೇಲೆ ತೆಂಗಿನ ಮರ ಬಿದ್ದು ₹3 ಲಕ್ಷದ ಪರಿವರ್ತಕ ಹಾಳಾಗಿದೆ.

ಶಂಕರಪ್ಪ ಲೇಔಟ್ ಬಳಿ 5ನೇ ಅಡ್ಡ ರಸ್ತೆಯಲ್ಲಿನ ಮನೆಯೊಂದರ ಮೇಲ್ಬಾಗದ ಕಬ್ಬಿಣದ ಚಾವಣಿ ಕುಸಿದು ವಿದ್ಯುತ್ ತಂತಿಯ ಮೇಲೆ ಬಿದ್ದ ರಭಸಕ್ಕೆ ವಿದ್ಯುತ್ ಕಂಬಗಳು ನೆಲಕ್ಕುರುಳಿದೆ.

ADVERTISEMENT

ಶಾರದ ನಗರದಲ್ಲಿ ಗಾಳಿಯ ರಭಸಕ್ಕೆ ಎರಡು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಕೂಡಲೇ ನಗರದಾದ್ಯಂತ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ. ಸಾರ್ವಜನಿಕರ ಮಾಹಿತಿಯನ್ನು ಆಧರಿಸಿ ಬೆಸ್ಕಾಂ ಇಲಾಖೆಯ ಎಇಇ ಕೆ.ಪಿ.ಜಯಪ್ಪ ತಮ್ಮ ನೌಕರರೊಂದಿಗೆ ತಕ್ಷಣವೇ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ.

ಬೆಸ್ಕಾಂ ಎಇಇ ಕೆ.ಪಿ.ಜಯಪ್ಪ ಮಾತನಾಡಿ, ಈಗಾಗಲೇ ಶೇಖಡಾ 80 ಕಡೆಗಳಿಗೆ ವಿದ್ಯುತ್ ಪೂರೈಕೆ ಆರಂಭಿಸಲಾಗಿದ್ದು, ಬೆಸ್ಕಾಂ ಇಲಾಖೆಗೆ ಸುಮಾರು ₹6 ಲಕ್ಷ ಮೌಲ್ಯ ನಷ್ಟವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.