ADVERTISEMENT

ಹುಳು ಬಿದ್ದ ಧಾನ್ಯ ಪೂರೈಕೆ: ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 5:52 IST
Last Updated 30 ಜನವರಿ 2026, 5:52 IST
ಬಿ.ಸುರೇಶ್‌ಗೌಡ
ಬಿ.ಸುರೇಶ್‌ಗೌಡ   

ತುಮಕೂರು: ಹುಳು ಬಿದ್ದ ಧಾನ್ಯದಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸಿ ಮಕ್ಕಳಿಗೆ ನೀಡುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಬಿ.ಸುರೇಶ್‌ಗೌಡ ಒತ್ತಾಯಿಸಿದರು.

ಮಾರುಕಟ್ಟೆಯಲ್ಲಿ ತೊಗರಿ ಬೇಳೆ ಕೆ.ಜಿ ₹93 ಇದೆ. ಆದರೆ ಮಕ್ಕಳ ಬಿಸಿಯೂಟಕ್ಕೆ ಕೆ.ಜಿ ₹63ಕ್ಕೆ ಬೇಳೆ ಪೂರೈಕೆ ಮಾಡಲಾಗುತ್ತಿದೆ. ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಪೂರೈಕೆ ಮಾಡಲು ಹೇಗೆ ಸಾಧ್ಯ? ಇಷ್ಟು ಬೆಲೆಗೆ ಇನ್ನೆಂತಹ ಗುಣಮಟ್ಟದ ತೊಗರಿ ಬೇಳೆ ಪೂರೈಕೆ ಮಾಡಲಿದ್ದಾರೆ ಎಂದು ವಿಧಾನಸಭೆಯಲ್ಲಿ ಪ್ರಶ್ನಿಸಿದರು.

ಹಸು, ಹಂದಿಯೂ ತಿನ್ನುವುದಿಲ್ಲ. ಅಂತಹ ತೊಗರಿ ಬೇಳೆಯನ್ನು ಶಾಲಾ ಮಕ್ಕಳ ಊಟ ತಯಾರಿಸಲು ಬಳಸಲಾಗುತ್ತಿದೆ. ಆದರೆ ಅಕ್ಷರ ದಾಸೋಹ ಸಮಿತಿ ಏನು ಮಾಡುತ್ತಿದೆ? ಇಲಾಖೆ ಆಯುಕ್ತರೇ ಟೆಂಡರ್ ಅಂತಿಮಗೊಳಿಸುತ್ತಾರೆ. ಪಿ.ಎಂ ಪೋಷಣ್ ಎಂಬ ಪ್ರಧಾನಿ ಹೆಸರಿನಲ್ಲಿರುವ ಈ ಯೋಜನೆಗೆ ಒಬ್ಬ ನಿರ್ದೇಶಕರೂ ಇರುತ್ತಾರೆ. ಈ ಇಬ್ಬರು ಅಧಿಕಾರಿಗಳು ಮುಖ್ಯ ಹೊಣೆಗಾರರು. ಈ ಬಗ್ಗೆ ತನಿಖೆ ನಡೆಸಿ ಈ ಇಬ್ಬರು ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ADVERTISEMENT

ಮಾದರಿ (ಸ್ಯಾಂಪಲ್‍) ತೋರಿಸುವ ಸಮಯದಲ್ಲಿ ಕೊಡುವ ಬೇಳೆಯೇ ಬೇರೆ. ಶಾಲೆಗಳಿಗೆ ಸರಬರಾಜು ಮಾಡುವ ಮೂಟೆಯೇ ಬೇರೆ. ರಾಜ್ಯದಲ್ಲಿ ನಡೆದಿರುವ ಈ ಹಗರಣದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಜರುಗಿಸಲು ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.