ADVERTISEMENT

ಕಾರ್ಕಳ: ಮಳೆಗಾಳಿಗೆ ಲಕ್ಷಾಂತರ ಹಾನಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2013, 6:32 IST
Last Updated 11 ಜೂನ್ 2013, 6:32 IST

ಕಾರ್ಕಳ: ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಭಾನುವಾರ ರಾತ್ರಿ ಬಿದ್ದ ಬಿರುಸಿನ ಮಳೆಯ ಪರಿಣಾಮ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. 
ಮಳೆಯಿಂದ ಪಟ್ಟಣದ ಅನಂತ ಶಯನ ದೇವಸ್ಥಾನದ ತೆಂಕು ದಿಕ್ಕಿನ ಗೋಡೆ ಸೋಮವಾರ ಕುಸಿದಿದ್ದು, ಸುಮಾರು ರೂ.3ಲಕ್ಷ ನಷ್ಟವಾಗಿದೆ.

ಗೋಡೆ ಕುಸಿದು ಬಿದ್ದ ರಭಸಕ್ಕೆ ಅದರ ಪಕ್ಕದಲ್ಲಿ ನಿಲ್ಲಿಸಿದ್ದ ಟೂರಿಸ್ಟ್ ಓಮ್ನಿ ಕಾರಿನ ಮೇಲೆ ಗೋಡೆಯ ಕಲ್ಲುಗಳು ಬಿದ್ದು ಕಾರು ಜಖಂಗೊಂಡಿದೆ. ಪುರಾತತ್ವ ಇಲಾಖೆ ಯಿಂದ ಈ ದೇವಾಲಯದ ಆವರಣ ಗೋಡೆಯನ್ನು ನಿರ್ಮಾಣ ಮಾಡ ಲಾಗಿತ್ತು. ಗೋಡೆಯ ಕಳಪೆ ಕಾಮಗಾರಿ ಕುರಿತು ಹಲವು ದೂರು ಗಳು ಬಂದಿದ್ದರೂ ಅವನ್ನು ಲೆಕ್ಕಿಸದೆ ಹಾಗೂ ಪುರಸಭೆ ಪರವಾನಿಗೆ ಪಡೆಯದೇ ಇಲಾಖೆ ಗೋಡೆ ನಿರ್ಮಿಸಿತ್ತು ಎನ್ನಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ನಿರ್ಮಲಾ ದೇವಿ ಭೇಟಿ ನೀಡಿ ಪರೀಶೀಲಿಸಿದರು. ಸದಾ ಜನಜಂಗುಳಿ ಇರುವ ಈ ರಸ್ತೆಯಲ್ಲಿ ಮುಂದೆ ಯಾವುದೇ ಅವಘಡಗಳು ನಡೆಯ ದಂತೆ ಮುನ್ನೆಚ್ಚರಿಕೆಯಾಗಿ ಕುಸಿದು ಬಿದ್ದ ಗೋಡೆಯ ಅವಶೇಷಗಳನ್ನು ತೆರವುಗೊಳಿಸುವಂತೆ ಪುರಾತತ್ವ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿ ದರು. ತಹಶೀಲ್ದಾರ್ ಜೊತೆಗೆ ಮಾಣಿಕ್ಯ, ಕಂದಾಯ ಅಧಿಕಾರಿ ಇನ್‌ಸ್ಪೆಕ್ಟರ್, ಪುರಸಭಾ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಸದಸ್ಯ ಮೊಹಮದ್ ಶರೀಫ್ ಮತ್ತಿತರರು ಇದ್ದರು.

ತಾಲ್ಲೂಕಿನ ಚೋಲ್ಪಾಡಿ ಎಂಬಲ್ಲಿನ ಬಿಫಾತುಮ್ಮ ಎಂಬವರ ಮನೆ ಮೇಲೆ ಮರ ಬಿದ್ದ ಪರಿಣಾಮ ಆರ್.ಸಿ.ಸಿ ಮನೆಗೆ ಬಿರುಕು ಬಿದ್ದು ನಷ್ಟ ಸಂಭವಿಸಿದೆ. ಮರ ಬಿದ್ದ ಪರಿಣಾಮ 7 ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿದ್ದು ಸುಮಾರು 60ಸಾವಿರ ರೂಪಾಯಿ ಹಾನಿಯಾಗಿದೆ.

ಭಾರಿ ಗಾಳಿ ಮಳೆಯ ಕಾರಣ ತಾಲ್ಲೂಕಿನ ಹೆಬ್ರಿಯ ಕಲ್ಲೆಲಿನ ಗೋಕುಲದಾಸ ಎಂಬವರ ಕಲ್ಲು ಕಡಿ ಯುವ ಶೆಡ್‌ನ ಸಿಮೆಂಟ್ ಸೀಟುಗಳು ಹಾರಿ ಹೋಗಿ ರೂ.10ಸಾವಿರ ನಷ್ಟವುಂಟಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.