ADVERTISEMENT

ಕೋಟಿ ಚೆನ್ನಯ ಸಮಾಧಿ ಸ್ಥಳ ಅಭಿವೃದ್ಧಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 11:10 IST
Last Updated 5 ಆಗಸ್ಟ್ 2013, 11:10 IST

ಹೆಜಮಾಡಿ (ಪಡುಬಿದ್ರಿ): ಕೋಟಿ ಚೆನ್ನಯ ಜನ್ಮಸ್ಥಳ ಅಭಿವೃದ್ಧಿಗೆ ಈಗಾ ಗಲೇ 5 ಕೋಟಿ ರೂಪಾಯಿ ಮಂಜೂ ರು ಮಾಡಿದ್ದು, ಮುಂದಿನ ವರ್ಷ ಕೋಟಿ ಚೆನ್ನಯ ಸಮಾಧಿ ಸ್ಥಳ ಅಭಿವೃದ್ಧಿಗೂ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.

ಹೆಜಮಾಡಿ ಬಿಲ್ಲವರ ಸಂಘದ ಸಭಾಂಗಣದಲ್ಲಿ ಭಾನುವಾರ ನಡೆದ ಯುವವಾಹಿನಿಯ 26ನೇ ವಾರ್ಷಿಕ ಸಮಾವೇಶದಲ್ಲಿ ಅವರು ಯುವ ವಾಹಿನಿಯ ವಾರ್ಷಿಕ ವಿಶೇಷಾಂಕ  `ಸಿಂಚನ'ವನ್ನು  ಬಿಡುಗಡೆ ಮಾಡಿ ಬಳಿಕ ಮಾತನಾಡಿದ ಸೊರಕೆ, ಬ್ರಹ್ಮಶ್ರೀ ನಾರಾಯಣ ಗುರುಗಳ ಅಧ್ಯಯನ ಪೀಠಕ್ಕಾಗಿ ಪ್ರತಿಷ್ಠಾನ ಸ್ಥಾಪನೆಗೆ 2 ಕೋಟಿ ರೂಪಾಯಿ ಅನುದಾನವನ್ನು ಬಜೆಟ್ ಉತ್ತರ ವೇಳೆ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ ಎಂದರು.

ಮೂರ್ತೇದಾರರ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ಮುಂದಡಿ ಇರಿಸಿದೆ. ಇದಕ್ಕೆ ಪೂರಕವಾಗಿ ಶೇಂದಿ ಯನ್ನು ಆಹಾರ ವಸ್ತುವೆಂದು ಪರಿಗಣಿಸಿ ವಿವಿಧ ಸವಲತ್ತು ನೀಡಲು ನಿರ್ಧರಿ ಸಲಾಗಿದೆ ಎಂದರು. ವಾರ್ಷಿಕ ಸಮಾವೇಶವನ್ನು ಹೆಜಮಾಡಿ ಬಿಲ್ಲವರ ಸಂಘದ ಅಧ್ಯಕ್ಷ ದೊಂಬ ಕೆ.ಪೂಜಾರಿ ಉದ್ಘಾಟಿಸಿದರು. ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕಿ ಮಧುಮಾಲಾ ದಿಕ್ಸೂಚಿ ಭಾಷಣ ಮಾಡಿದರು.

ಇದೇ ಸಂದರ್ಭದಲ್ಲಿ ಮುದ್ದು ಮೂಡುಬೆಳ್ಳೆ, ಕೃಷ್ಣ ಜಿ.ಮಂಜೇಶ್ವರ ಸಹಿತ ವಿವಿಧ ಸಾಧಕರನ್ನು, ಪ್ರತಿಭಾವಂತರನ್ನು ಸನ್ಮಾನಿಸಲಾಯಿತು. ಸಚಿವ ಸೊರಕೆಯವರಿಗೂ ಯುವವಾಹಿನಿ ವತಿಯಿಂದ ಸನ್ಮಾನ ನಡೆಯಿತು. ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ವಿಜಯಕುಮಾರ್ ಕುಬೆವೂರು ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಆಕಾಶವಾಣಿ ಪ್ರಸರಣ ನಿರ್ವಹಣಾಧಿಕಾರಿ ಡಾ.ಸದಾನಂದ ಪೆರ್ಲ, ಹೆಜಮಾಡಿ ಬಿಲ್ಲವರ ಸಂಘದ ಮುಂಬಾಯಿ ಸಮಿತಿ ಅಧ್ಯಕ್ಷ ಮೋಹನ್‌ದಾಸ್ ಹೆಜ್ಮಾಡಿ, ನಿರ್ದೇಶಕ ಪ್ರೇಮ ನಾಥ್ ಕೆ,  ತಾರನಾಥ್ ಎಚ್.ಬಿ, ಉದಯ ಅಮೀನ್ ಮಟ್ಟು, ಶಿವರಾಮ ಜಿ.ಅಮೀನ್, ಪತ್ರಕರ್ತ ನರೇಂದ್ರ ಕೆರೆಕಾಡು ಯುವವಾಹಿನಿಯ ಎಲ್ಲಾ ಘಟಕಾಧ್ಯಕ್ಷರು ಉಪಸ್ಥಿತರಿದ್ದರು.

2013-14ನೇ ಸಾಲಿನ ನೂತನ ಅಧ್ಯಕ್ಷ ರವಿಚಂದ್ರ ಮತ್ತವರ ತಂಡಕ್ಕೆ ಪ್ರತಿಜ್ಞಾನಿಧಿ ಬೋಧಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.