ADVERTISEMENT

ರಕ್ತದಾನ ಮಾಡಲು ಯುವಜನತೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2013, 10:11 IST
Last Updated 17 ಜುಲೈ 2013, 10:11 IST

ಕಾರ್ಕಳ: `ಯುವಜನತೆ ರಕ್ತದಾನದಲ್ಲಿ ಭಾಗವಹಿಸುವ ಮೂಲಕ ಅವಶ್ಯ ಇರುವವರಿಗೆ ರಕ್ತ ನೀಡುವಲ್ಲಿ ಸಹಕರಿಸಬೇಕು' ಎಂದು ನಂದಳಿಕೆ ಸುಹಾಸ್ ಹೆಗ್ಡೆ ಸಲಹೆ ನೀಡಿದರು.

ತಾಲ್ಲೂಕಿನ ನಿಟ್ಟೆ ಡಾ.ಎನ್.ಎಸ್.ಎ.ಎಂ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಯೂತ್ ರೆಡ್ ಕ್ರಾಸ್ ಸೊಸೈಟಿ ಆಶ್ರಯದಲ್ಲಿ ಭಾನುವಾರ ರಕ್ತದಾನ ಶಿಬಿರ ಉದ್ಘಾಟಿಸಿ ರಾಷ್ಟ್ರೀಯ ಸೇವಾ ಯೋಜನೆಯ ಅಭ್ಯರ್ಥಿಗಳು  ಮಾತ್ರವಲ್ಲದೇ ಇತರರೂ ರಕ್ತದಾನ ನೀಡುವ ಮೂಲಕ ಸಮಾಜದ ಆರೋಗ್ಯ ಸೇವೆಯಲ್ಲಿ ಸಹಕರಿಸಬೇಕು ಎಂದರು.

ಉಡುಪಿ ಅಜ್ಜರಕಾಡು ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಶರತ್ ಕುಮಾರ್ ರಕ್ತದಾನದ ಕುರಿತು ಮಾಹಿತಿ ನೀಡಿದರು. ಕಾಲೇಜು ಪ್ರಾಂಶುಪಾಲರಾದ ವೀಣಾ ಬಿ.ಕೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ದಯಾನಂದ ಬಾಯರ್, ಯೂತ್ ರೆಡ್ ಕ್ರಾಸ್ ಸೊಸೈಟಿಯ ಸಂಯೋಜಕ ವಿಘ್ನೇಶ್ ಶೆಣೈ, ದಿನೇಶ್ ಸುವರ್ಣ ಮತ್ತಿತರರು ಇದ್ದರು.

25ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ಪುನಾರುಕರೆ ಸರ್ಕಾರಿ ಹಿರಿಯ ಪ್ರಾ.ಥಮಿಕ ಶಾಲೆಯ ಮುಖ್ಯ ಶಿಕ್ಷಕ  ದೇವದಾಸ್ ಪಾಟ್ಕರ್ ಹಾಗೂ ಬೋಳ ವಂಜಾರಕಟ್ಟೆ ಪೋಸ್ಟ್ ಮಾಸ್ಟರ್ ಸುನಿಲ್ ದೇವಾಡಿಗ ಅವರನ್ನು ಅಭಿನಂದಿಸಲಾಯಿತು.

ಶಿಬಿರದಲ್ಲಿ 67 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ಬೆಳ್ಮಣ್ ಜೇಸಿಐ ಅಧ್ಯಕ್ಷ ರಘುನಾಥ್ ನಾಯಕ್ ಪುನಾರು ಸ್ವಾಗತಿಸಿದರು. ಕಾರ್ಯದರ್ಶಿ ಸಂಜೀವ ಕೆದಿಂಜೆ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.