ADVERTISEMENT

ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿಗೆ ಕಬಡ್ಡಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2011, 10:05 IST
Last Updated 8 ಏಪ್ರಿಲ್ 2011, 10:05 IST

ಪುತ್ತೂರು: ಇಲ್ಲಿಯ ವಿವೇಕಾನಂದ  ಎಂಜಿನಿಯರಿಗ್ ಕಾಲೇಜಿನ ಕಬಡ್ಡಿ ತಂಡವು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಾಯಿ ಲಿಯೋ ಅಂತರ್ ಕಾಲೇಜು ಕಬಡ್ಡಿ ಪಂದ್ಯಾಟದಲ್ಲಿ  ಪ್ರಥಮ ಸ್ಥಾನ ಪಡೆದು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ ಎಂದು ಕಾಲೇಜಿನ ಪ್ರಾಂಶುಪಾಲ ಅಶೋಕ್ ಕುಮಾರ್ ತಿಳಿಸಿದ್ದಾರೆ.ಇದರೊಂದಿಗೆ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು ಕಡಡ್ಡಿ  ತಂಡವು ಕಳೆದ ಮೂರು ವರ್ಷಗಳಲ್ಲಿ 7 ಟ್ರೋಫಿಗಳನ್ನು ಗಳಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಅವರು ತಿಳಿಸಿದ್ದಾರೆ.
 

ಉಜ್ವಲ್ ಕುಮಾರ್ ತಂಡದ ನಾಯಕರಾಗಿದ್ದು, ಅವಿನಾಶ್, ಅಜಿತ್, ಸುನಿಲ್, ಗಗನ್, ಶಶಿಕಿರಣ್, ಫ್ಲೋಯಡ್, ಪ್ರತಿಕ್.ವಿ.ರಾವ್ , ಶಿವರಂಜನ್ ರೈ, ರವಿಕಿರಣ್, ಮನೋಜ್ ಮತ್ತು ಹಿತೇಶ್ ತಂಡವನ್ನು ಪ್ರತಿನಿಧಿಸಿದ್ದರು  ಎಂದು  ತಿಳಿಸಿರುವ ಅವರು  ತಂಡದ ಸಾಧನೆಯ ಕುರಿತು ಅಭಿನಂದನೆ  ವ್ಯಕ್ತಪಡಿಸಿದ್ದಾರೆ.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT