ADVERTISEMENT

ಹೃದಯ ತಪಾಸಣೆ ಬಡವರಿಗೆ ತಲುಪಲಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 6:20 IST
Last Updated 4 ಅಕ್ಟೋಬರ್ 2012, 6:20 IST

ಕಾರ್ಕಳ: ಗ್ರಾಮೀಣ ಪ್ರದೇಶವೆನಿಸಿದ ಬೆಳ್ಮಣ್‌ನ ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ ಬೆಂಗಳೂರಿನ ನಾರಾಯಣ ಹೃದಯಾಲಯದ ಸೋಮೇಶ್ವರಪುರ ಲಯನ್ಸ್ ಕ್ಲಬ್ ಹಾಗೂ ಬೆಳ್ಮಣ್ ಲಯನ್ಸ್ ಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ ಆರಂಭಗೊಂಡ ಉಚಿತ ಹೃದಯ ತಪಾಸಣಾ ಕೇಂದ್ರ ಬಡವರಿಗೆ ತಲುಪಲಿ ಎಂದು ಲಯನ್ ಜಿಲ್ಲೆ 324ಡಿಯ ಮಲ್ಟಿಪಲ್ ಕೌನ್ಸಿಲ್ ಚೇರ್‌ಮೆನ್ ಡಾ.ಎಸ್.ನಾಗರಾಜ ರಾವ್ ತಿಳಿಸಿದರು.

ತಾಲ್ಲೂಕಿನ ಬೆಳ್ಮಣ್‌ನಲ್ಲಿ ಆರಂಭಗೊಂಡ ನೂತನ ಹೃದಯ ತಪಾಸಣಾ ಕೇಂದ್ರದಲ್ಲಿ ವ್ಯಕ್ತಿಯ ಇಸಿಜಿ ಪರೀಕ್ಷೆಯಾಗುತ್ತಿದ್ದಂತೆ ಅದು ಅಂತರ್ಜಾಲದ ಮೂಲಕ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ರವಾನೆಗೊಂಡು ಅದರ ಫಲಿತಾಂಶ ಹಾಗೂ ಚಿಕಿತ್ಸೆಯ ಮಾಹಿತಿ ಲಭಿಸುತ್ತದೆ. ಇದನ್ನು ಪರಿಸರದ ಜನ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಲಯನ್ ಜಿಲ್ಲೆ 317ಸಿಯ ಗವರ್ನರ್ ಮಧುಸೂದನ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.ಉಡುಪಿ ಜಿಲ್ಲಾ ಪ್ರಧಾನ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯಿರಿ, ಡಾ.ಎಚ್.ಎಸ್.ಮಂಜಪ್ಪ, ಸುರೇಶ್ ಪ್ರಭು, ಲಾರೆನ್ಸ್ ಡಿಸೋಜಾ, ಸುಹಾಸ ಹೆಗ್ಡೆ, ಲಯನ್ಸ್ ಅಧ್ಯಕ್ಷ ಬಿ.ಸೀತಾರಾಮ ಭಟ್, ಶ್ರೀಧರ ಶೇಣವ, ಲಯನೆಸ್ ಅಧ್ಯಕ್ಷೆ ಮಾಯಾ ರಾವ್, ಲಿಯೋ ಅಧ್ಯಕ್ಷೆ ಕೆವಿನ್ ಡಿಮೆಲ್ಲೊ, ಪ್ರಾಥಮಿಕ ಆರೋಗ್ರ ಕೇಂದ್ರದ ಆರೋಗ್ಯಾಧಿಕಾರಿ ಡಾ.ಸತೀಶ್ ಮತ್ತಿತರರು ಇದ್ದರು.

ಎನ್.ಎಂ.ಹೆಗ್ಡೆ ಸ್ವಾಗತಿಸಿದರು. ಉಪನ್ಯಾಸಕ ಡಾ.ಪ್ರಕಾಶ ಶೆಣೈ ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ಶೇಖರ್ ಎನ್ನುವವರ ಹೃದಯ ತಪಾಸ ಪ್ರಾತ್ಯಕ್ಷಿಕೆ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.