
ಉಡುಪಿ: ‘ಸಾಂಸ್ಕೃತಿಕ ಮತ್ತು ಐತಿ ಹಾಸಿಕ ಮರು ಅಧ್ಯಯನ ಮಾಡುವ ಜವಾಬ್ದಾರಿ ಯುವ ಸಂಶೋಧಕರ ಮೇಲಿದೆ’ ಎಂದು ಪ್ಯಾರಿಸ್‌ನ ಸಮಾಜ ಮತ್ತು ಮನಶಾಸ್ತ್ರಜ್ಞ ಪ್ರೊ.ಗ್ಯಾಲಿ ಜೀನ್ ಕ್ಲಾಡೆ ಹೇಳಿದರು.
ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ, ಶಿರ್ವದ ಮುಲ್ಕಿ ಸುಂದರ ರಾಮ ಶೆಟ್ಟಿ ಕಾಲೇಜಿನ ಇತಿಹಾಸ ವಿಭಾಗದ ವಿದ್ಯಾರ್ಥಿಗಳು ಕುಂದಾಪುರದ ಕರ್ಕುಂಜೆ ಗ್ರಾಮದ ಬುದ್ಧನಜಡ್ಡುವಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಗ್ರೇಟ್ ಟೀಮ್ ಇಂಡಿಯಾನ ಮರು-ಅಧ್ಯಯನ ಸಂರಕ್ಷಣಾ ಕೇಂದ್ರ’ವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಗ್ರೇಟ್ ಟೀಮ್ ಇಂಡಿಯಾನ ಮರು-ಅಧ್ಯಯನ ಸಂರಕ್ಷಣಾ ಕೇಂದ್ರವು ಈಗಾಗಲೇ ಅನೇಕ ಐತಿಹಾಸಿಕ ವಿಷಯ ಸಂಪನ್ಮೂಲಗಳನ್ನು ಸಂರಕ್ಷಿಸುವ ಕೆಲಸ ನಡೆಸಿದೆ. ಈ ಶತಮಾನದ ಅಥವಾ ಪ್ರಪ್ರಾಚೀನ ವಸ್ತುಗಳು, ಐತಿಹಾಸಿಕ ನೆಲೆಗಳು ನಮ್ಮ ಸುತ್ತಮುತ್ತ ಬಹಳಷ್ಟಿವೆ. ನಮ್ಮದೇ ಬುತ್ತಿ ನಮ್ಮದೇ ದುಡ್ಡು ಎನ್ನುವ ತತ್ವ–ಸಿದ್ಧಾಂತದ ಮೇಲೆ ಬಳಗದ ಸದಸ್ಯರುಗಳು ಕಾರ್ಯ ನಡೆಸುತ್ತಾ ಬಂದಿದ್ದಾರೆ ಎಂದರು.
ಗ್ರೇಟ್ ಟೀಮ್ ಇಂಡಿಯಾನ ಸ್ಥಾಪಕ ನಿರ್ದೇಶಕ ಪ್ರೊ.ಎಸ್.ಎ. ಕೃಷ್ಣಯ್ಯ ಮಾತನಾಡಿ, ಮರು-ಅಧ್ಯಯನ ಮೂ ಲಕ ಸಮರ್ಥವಾಗಿ ದಾಖಲೆ ಗಳನ್ನು ರುಜುವಾತು ಮಾಡಬಹುದು, ಅನ್ವ ಯಿಕ ಶಾಸ್ತ್ರಗಳನ್ನು ಒಳಗೊಂಡಂತೆ ವೈಜ್ಞಾನಿಕವಾಗಿ ಮರು ಅಧ್ಯಯನ, ದತ್ತ ಜೋಡಣೆ, ಸಂರಕ್ಷಣೆ ಆಗಬೇಕು ಎಂದರು.
ಕ್ಷೇತ್ರಕಾರ್ಯ ಶೋಧಕರಾದ ಶ್ರೀಧರ ಭಟ್- ಕಡಿಯಾಳಿ, ಸಂಶೋಧಕ ಶೇಜೇ ಶ್ವರ ನಾಯಕ್ ಹಾಗೂ ಪ್ರೊ.ಟಿ. ಮುರುಗೇಶಿ, ಪ್ರಶಾಂತ ಶೆಟ್ಟಿ, ಸ್ಥಳೀಯ ಸಂಘಟಕರಾದ ನಾಗೇಶ ಪೂಜಾರಿ ಮತ್ತು ಮಂಜು ಪೂಜಾರಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.