ADVERTISEMENT

ಒಂದೇ ವೇದಿಕೆಗೆ ಮುಖಂಡರು ಒಳ್ಳೆಯ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2018, 7:22 IST
Last Updated 7 ಫೆಬ್ರುವರಿ 2018, 7:22 IST

ಚುನಾವಣೆಯ ಹೊಸ್ತಿಲಲ್ಲಿ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳ ಮುಖಂಡರನ್ನು ‘ಪ್ರಜಾಮತ’ ವೇದಿಕೆಗೆ ಕರೆ ತಂದಿರುವ ಪ್ರಯತ್ನ ಚೆನ್ನಾಗಿದೆ. ಮುಖಂಡರ ಚಿಂತನೆ ಅನಾವರಣಗೊಳಿಸುವ ಮೂಲಕ ರಾಜ್ಯದ ಮತದಾರರು ಅವರನ್ನು ಅರ್ಥ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಆಡಳಿತಾರೂಢ ಪಕ್ಷದ ನಾಯಕರು ಚುನಾವಣೆಯ ಹೊಸ್ತಿಲಲ್ಲಿ ಆಶ್ವಾಸನೆ ನೀಡುವುದು ಅರ್ಥಹೀನ ಅನಿಸುತ್ತದೆ. ಹಲವು ಭಾಗ್ಯಗಳನ್ನು ನೀಡಿದ ಸರ್ಕಾರ ಎಂಬ ಖ್ಯಾತಿಗೆ ಸರ್ಕಾರ ಪಾತ್ರವಾಗಿದೆ, ಆ ಕಾರ್ಯಕ್ರಗಳು ಎಷ್ಟರ ಮಟ್ಟಿಗೆ ಜನರಿಗೆ ತಲುಪಿವೆ ಎಂದು ಖಚಿತಪಡಿಸಿಕೊಂಡು, ಆ ನಂತರ ಆರೋಗ್ಯ ಭಾಗ್ಯದ ಬಗ್ಗೆ ಮಾತನಾಡಿದರೆ ಒಳಿತು.

ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾದ ಬಗ್ಗೆ ಮಾತನಾಡಿದ್ದಾರೆ, ಸಮಸ್ಯೆಗಳಿಗೆ ಶಾಶ್ವತ ಪರಿಹಾರದ ಬಗ್ಗೆ ಸ್ಪಷ್ಟತೆ ಇಲ್ಲ. ನೀರಾವರಿಗೆ ₹ 1 ಲಕ್ಷ ಕೋಟಿ ನೀಡುವುದಾಗಿ ಹೇಳಿರುವ ಬಿಎಸ್‌ವೈ ಅವರು ಮಹಾದಾಯಿ ವಿವಾದದಿಂದ ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸಿರುವಂತಿದೆ.
ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ
ಉಪನ್ಯಾಸಕ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.